e-ಸುದ್ದಿ, ಮಸ್ಕಿ
ಬಡವರಿಗಾಗಿ ಹಗಲಿರುಳು ಶ್ರಮಿಸಿ ಸ್ವಾಭಿಮಾನಿ ಬದಕು ಕಲ್ಪಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿಗೆ ಶ್ರೀಕಾರ ಹಾಕಿದ ರಾಜೀವ ಗಾಂಧಿಯವರ ಸಾಧನೆ ನಮ್ಮಗೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ದಿ.ರಾಜೀವಗಾಂದಿ ಮತ್ತು ದಿ.ದೇವರಾಜು ಅರಸು ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಡವರ ಅಭಿವೃದ್ದಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು ಪ್ರತಿಯೊಂದು ಜಾತಿ ಜನಾಂಗದವರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಬಸನಗೌಡ ತುರ್ವಿಹಾಳ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಶೇಕ್ ಮೈಬೂಬುಸಾಬ ಮುದ್ದಾಪುರ, ದುರುಗೇಶ ವಕೀಲರು, ಕೃಷ್ಣ ಚಿಗರಿ, ಪಂಪನಗೌಡ ಉದ್ದಿಹಾಳ, ಆನಂದ ವೀರಾಪೂರು, ಬಸನಗೌಡ ಮುದಬಾಳ, ಮಲ್ಲನಗೌಡ ಸುಂಕನೂರು, ಸಂಜಯಶೇಠ ಬಳಗಾನೂರು, ನಾಗರೆಡ್ಡಪ್ಪ ಹತ್ತಿಗುಡ್ಡ, ಶರಣಪ್ಪ ಎಲಿಗಾರ ಹಾಗೂ ಇತರರು ಭಾಗವಹಿಸಿದ್ದರು.
20-ಎಂಎಸ್‍ಕೆ-2