ಹಸಿರುಡುಗೆಯ ಹುಡುಗಿ

ಹಸಿರುಡುಗೆಯ ಹುಡುಗಿ

ಹಸಿರುಡುಗೆಯ ಹುಡುಗಿ
ಹಸಿರು ಹುಲ್ಲು ಹಾಸಿನಲಿ
ಹಸಿರೆಲೆಯ ಛತ್ರ ಹಿಡಿದು
ಮೇಕೆ-ಮರಿಯ ಹಿಡಿದ ಬೆಡಗಿ..

ತುಂತುರು ಮಳೆ ಹನಿ-ಹನಿಗಳು
ಮುತ್ತಿಡುತ ಕೇಶ ರಾಶಿಗೆ
ಜಾರುತಿವೆ ನಸುನಗುತಲಿ
ಭೂರಮೆಯ ಹಸಿರೊಡಲಿಗೆ..

ನೆನೆಯುತಲಿದೆ ನೀಲಿ ಸೆರಗು
ನಾಚಿಹಳು ನೆನಪಿಸುತಲಿ
ಇನಿಯನೊಲವ ಕಣ್ಣು ಮುಚ್ಚಿ
ಕಳೆದ ಮಧುರ ಕ್ಷಣಗಳ..

ಹಸಿರೆತ್ತಲೂ ನಲಿಯುತಿದೆ
ಹೃದಯ ಹಿಗ್ಗಿ ಹಾಡುತಿದೆ
ಸಂಪ್ರೀತಿಯು ಸೂಸಿದೆ
ಸೃಷ್ಟಿ ಒಲಿದು ಹರಸುತಿದೆ..

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ. 

Don`t copy text!