ಬಳಗಾನೂರಿನಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

ಬಳಗಾನೂರಿನಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

e-ಸುದ್ದಿ, ಬಳಗಾನೂರು

ರೈತರ ಏಳಿಗೆಗಾಗಿ ಸರ್ಕಾರದಿಂದ ಕೃಷಿ ಇಲಾಖೆಯ ಮುಖಾಂತರ ದೊರೆಯುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಪಡೆದುಕೊಳ್ಳುವಲ್ಲಿ ರೈತ ಬಾಂದವರು ಮುಂದಾಗಬೇಕು ಎಂದು ಬಳಗಾನೂರು ಕೃಷಿ ಅಧಿಕಾರಿ ಶಿವದತ್ತ ಬಿ ಹೇಳಿದರು. ಬಳಗಾನೂರು ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಅಭಿವೃದ್ಧಿಗಾಗಿ ಸರ್ಕಾರ ಸಹಾಯಧನದಲ್ಲಿ ಬೀಜ ವಿತರಣೆ, ಸಾವಯವ ಗೊಬ್ಬರ, ಕ್ರೀಮಿನಾಶಕ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದು ರೈತರು ನಮ್ಮ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.

ಕೃಷಿ ಅಭಿಯಾನ ಕಾರ್ಯಕ್ರಮದ ಮುಖಾಂತರವಾಗಿ ರೈತರಿಗೆ ಕೃಷಿ ಹಾಗೂ ಕೃಷಿಗೆ ಸಂಬಂದಿತ ಇಲಾಖೆಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಸೂಕ್ತ ರೀತಿಯ ಮಾಹಿತಿಯನ್ನು ನೀಡಲಾಗುವುದು ಮತ್ತು ಫಸಲ್ ಭೀಮಾ ಯೋಜನೆಯ ಮಾಹಿತಿಯನ್ನು ಕೂಡಾ ನೀಡಲಾಯಿತು. ಇಂತಹ ಅಭಿಯಾನದ ಸದುಪಯೋಗವನ್ನು ರೈತ ಭಾಂದವರು ಪಡೆದುಕೊಂಡು ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಬಳಗಾನೂರು ಪಟ್ಟಣ ಹಾಗೂ ಬಳಗಾನೂರು ಹೋಬಳಿ ಸೇರಿದಂತೆ, ಮತ್ತು ಗೌಡನಬಾವಿ, ಉದ್ಬಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಮಾಹಿತಿಯನ್ನು ನೀಡಲಾಯಿತು.

ಸಹಾಯಕ ಕೃಷಿ ಅಧಿಕಾರಿ
ಶಿವದತ್ತ ಬಿ , ಕೃಷಿ ಇಲಾಖೆ ಸಿಬ್ಬಂದಿ ಮೌನೇಶ ನಾಯಕ್‌ , ಪಂಪನಗೌಡ, ನಿಂಗಪ್ಪ ತಾತ ಪೂಜಾರಿ, ಬಸನಗೌಡ ಮುದಿಗೌಡರ್, ಮಹಾಬಲೇಶ, ಎಚ್, ಬುಳ್ಳನಗೌಡ ಶಂಕರಬಂಡಿ ಮುದುಕಪ್ಪ, ಬಸವರಾಜ, ಪಂಪನಗೌಡ, ರೈತರು ಉಪಸ್ಥಿತರಿದ್ದರು.

Don`t copy text!