ಆಧ್ಯಾತ್ಮಿಕ ಚಿಂತನೆಗಳು ನೆಮ್ಮದಿಯ ಬದುಕಿಗೆ ದಾರಿದೀಪ- ಶಾಸಕ ಬಸನಗೌಡ ತುರುವಿಹಾಳ
e-ಸುದ್ದಿ ಮಸ್ಕಿ
ಇಂದಿನ ಆಧುನಿಕ ಜೀವನ ಶೈಲಿಯ ಬದುಕಿನಿಂದಾಗಿ ನೆಮ್ಮದಿಯ ಬದುಕು ವಿರಳವಾಗುತ್ತಿದೆ ಆಧ್ಯಾತ್ಮಿಕ ಚಿಂತನೆಗಳಿಂದ ನೆಮ್ಮದಿಯ ಬದುಕು ಸಾಧ್ಯವಾಗಲಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಅಭಿಪ್ರಾಯಪಟ್ಟರು
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ಷಾಬಂಧನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಆಧ್ಯಾತ್ಮಿಕ ಚಿಂತನೆಗಳು ಆರೋಗ್ಯಕರ ಬದುಕಿಗೆ ಕಾರಣವಾಗುತ್ತವೆ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವರು ಉತ್ತಮವಾದ ಆಧ್ಯಾತ್ಮಿಕ ಚಿಂತನೆಯನ್ನು ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ. ರಕ್ಷಾಬಂಧನದ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿ ಸತ್ಕರಿಸಿದ್ದಕ್ಕೆ ಶಾಸಕರು ಧನ್ಯವಾದ ತಿಳಿಸಿದರು.
ಬ್ರಹ್ಮಕುಮಾರಿ ಹೇಮಾವತಿ ಅಕ್ಕನವರು ಮಾತನಾಡಿ ರಕ್ಷಾಬಂಧನದ ಬಗ್ಗೆ ವಿವರವಾಗಿ ಮಾತನಾಡಿದರು. ಸಿಂಧನೂರಿನ ಬಿ.ಕೆ. ಪಾರ್ವತಿ ಅಕ್ಕನವರು ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಶಂಕ್ರಪ್ಪ ಹಳ್ಳಿ ವೀರಭದ್ರಪ್ಪ ಗೌಡ ಹಳೆಕೋಟೆ ತಿಪ್ಪಣ್ಣ ಎಂಬಲದ, ಮಲ್ಲಿಕಾರ್ಜುನ ಗ್ರೀನ್ ಸಿಟಿ, ಬಸವರಾಜ್ ಮಡಿವಾಳ, ಸರಸ್ವತಿ ಅಮರೇಶ್ ,ಲಕ್ಷ್ಮೀದೇವಿ ವೀರಣ್ಣ, ಪಂಪಣ್ಣ ಮಲ್ಲಿಕಾರ್ಜುನ ಮಂಜುಳಾ ಸೇರಿದಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಾಗೂ ಗಣ್ಯರು ಪಾಲ್ಗೊಂಡಿದ್ದರು ಶಾಸಕರಿಗೆ ಸನ್ಮಾನ ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.