ರಕ್ಷಾಬಂಧನ

ರಕ್ಷಾಬಂಧನ

ಒಡಹುಟ್ಟಿದವರ ಅನುಬಂಧ
ಬಾಳ ಕುಸುಮದ ಪರಿಮಳದ ಗಂಧ
ಕುಸುಮದಲಿ ಗಂಧ ಬೆರೆತಿರುವ ತೆರದಿ
ಅಣ್ಣ ಅಕ್ಕ ತಮ್ಮ ತಂಗಿಯರ ಬಂಧ||

ಬಳ್ಳಿಯೊಂದಕೆ ನೂರಾರು ಹೂಗಳು
ಇವರೆಲ್ಲ ಒಂದೆ ತಾಯಿಯ ಮಕ್ಕಳು
ಭೇದಭಾವವಿಲ್ಲದ ರಕ್ತ ಸಂಬಂಧದ
ಅಳಿಸಲಾರದ ಅನುಬಂಧವಿದು||

ಒಟ್ಟಿಗೆ ಕೂಡಿ ಆಡಿ ಬೆಳೆದು ಬಂದವರು
ಸುಖ ದುಃಖಗಳಲಿ ಹೆಗಲಿಗೆ ಹೆಗಲು ಕೊಟ್ಟವರು ಇವರು ಒಡಹುಟ್ಟಿದವರು
ಒಂದೆ ತಾಯಿಬೇರಿಗೆ ಹರಡಿದ ಬಳ್ಳಿಗಳು||

ಬಿಡಲಾರದ ಬಂಧ ಬಿಡಲಾರಗದಿದು
ಸಹೋದರೆತೆಯ ಸಂಭಂಧವಿದು
ಮಮತೆಯಾ ರಕ್ಷೆಯ ಬಂಧವಿದು
ನೂಲಿನೆಳೆಲಿ ಬಂಧಿಸುವ ರಕ್ಷಾಬಂಧವಿದು ಹಬ್ಬವಾಗಿದೆ ಇಂದು||

ರಚನೆ: ಶ್ರೀ ಮತಿ ಆಶಾ ಎಸ್ ಯಮಕನಮರಡಿ

Don`t copy text!