ಆಧುನಿಕ ತಂತ್ರಜ್ಞಾನದೊಂದಿಗೆ ಎಮ್ ಕೆ ಹುಬ್ಬಳ್ಳಿಯ ಕಲ್ಮೇಶ್ವರ ಪ್ರೌಡ ಶಾಲೆಯಲ್ಲಿ ಅಟಲ್ ಟಿಂಕರಿಂಗ್‌ ಲ್ಯಾಬ್ ಉದ್ಘಾಟನೆಗೆ ಸಜ್ಜು

ಆಧುನಿಕ ತಂತ್ರಜ್ಞಾನದೊಂದಿಗೆ ಎಮ್ ಕೆ ಹುಬ್ಬಳ್ಳಿಯ ಕಲ್ಮೇಶ್ವರ ಪ್ರೌಡ ಶಾಲೆಯಲ್ಲಿ ಅಟಲ್ ಟಿಂಕರಿಂಗ್‌ ಲ್ಯಾಬ್ ಉದ್ಘಾಟನೆಗೆ ಸಜ್ಜು

e- ಸುದ್ದಿ ಬೈಲಹೊಂಗಲ 
ವರದಿ :ಉಮೇಶ ಗೌರಿ(ಯರಡಾಲ)

ಕಲ್ಮೇಶ್ವರ ಪ್ರೌಢಶಾಲೆಯ 14 ಕೊಠಡಿಗಳಲ್ಲಿ 8, 9 ಮತ್ತು 10ನೇ ತರಗತಿಯ ಒಟ್ಟು 642 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಇಂದು ಉದ್ಘಾಟನೆಗೆ ಸಿದ್ದಗೊಂಡಿದೆ. ಸುಮಾರು 12 ಲಕ್ಷ ವೆಚ್ಚದ ಎಟಿಎಲ್ ಪ್ರತ್ಯೇಕ ಲ್ಯಾಬ್‍ನಲ್ಲಿ 3 ಲ್ಯಾಪ್‍ಟ್ಯಾಪ್, ಪ್ರೋಜೋಕ್ಟರ್, 40ಚೇರ್, 10ಟೇಬಲ್, ಅಲ್ಮೇರಾ ಸೇರಿದಂತೆ ನೂರಾರು ವಿವಿಧ ಬಗೆಯ ಎಲೆಕ್ಟ್ರಾನಿಕ್ ಉಪಕರಣಗಳಿವೆ.

ಅಟಲ್ ಟಿಂಕರಿಂಗ್ ಲ್ಯಾಬ್‍ನಲ್ಲಿ 1.ರೊಬೊಟಿಕ್ಸ್, 2.ಏರೋಸ್ಪೇಸ್ ಡ್ರೋನ್ ತಂತ್ರಾಜ್ಞಾನ, 3.ರಿಮೋಟ್ ಐಯೋಟ್ ಸೆನ್ಸಿಂಗ್, 4.3ಡಿ ಮುದ್ರಣ, 5.ಬಯೋಮೆಟ್ರಿಕ್ಸ್ ಮತ್ತು ಬೈವಿಕ ತಂತ್ರಾಜ್ಞಾನ, ಎಲೆಕ್ಟ್ರಾನಿಕ್ಸ್ ಎಂಬ ಹಲವಾರು ಬಗೆಯ ಕಲಿಕೆಯ ಪ್ರತ್ಯೇಕ ವಿಭಾಗಗಳಿವೆ. ಇನೊವೇಟಿವ್ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಿಂದ ಪ್ರಾರಂಭವಾದ ಎಟಿಎಲ್ ಲ್ಯಾಬ್ ತಂತ್ರಜ್ಞಾನ ವಿಭಾಗಗಕ್ಕೆ ವಿಶೇಷವಾದ ಬುನಾದಿ ಹಾಕಿದೆ.
ಇಂದು ದೇಶ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಮುಂದುವರೆದಿದೆ.ಇಂತಹ ಸಮಯದಲ್ಲಿ ಗ್ರಾಮೀಣ ಭಾಗದಲ್ಲೂ ವಿಧ್ಯಾರ್ಥಿಗಳ ಕೌಶಲ್ಯತೆಗೆ ಒತ್ತು ನೀಡುವ ನಿಟ್ಟಿನಲ್ಲಿ
ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ಮಾದರಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆಗೆ ಸಜ್ಜಾಗಿದೆ.
ಹಿಂತಹ ಲ್ಯಾಬ್ ಗಳು ಬಹುತೇಕ ಪ್ರತಿ ಶಾಲೆಗಳಲ್ಲಿ ಪ್ರಾರಂಭ ಮಾಡಬೇಕು ಎಂಬುದು ಪ್ರಧಾನಿ ಅವರ ಮಹತ್ವದ ಯೋಜನೆ.. ಇದಕ್ಕೆ ಸರ್ಕಾರದಿಂದಲೂ ಅನುದಾನ ಬಿಡುಗಡೆ ಆಗುತ್ತಿದೆ.
ಅದರ ಸದುಪಯೋಗದ ಸಲುವಾಗಿ ಈ ಭಾಗದಲ್ಲಿ ತನ್ನದೇ ಶೈಕ್ಷಣಿಕ ಇತಿಹಾಸ ಹೊಂದಿರುವ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಪಟ್ಟಣದ ಎಸ್ ಕೆ ಇ ಎಸ್ ಕಮಿಟಿಯ ಪ್ರೌಢ ಶಾಲಾ ವಿಭಾಗದಲ್ಲಿ ಈ ಅಟಲ್ ಟೇಕರಿಂಗ ಲ್ಯಾಬ್ ಕರ್ನಾಟಕಕ್ಕೆ ಮಾದರಿವಾಗಿದೆ. ಇದರ ಹಿಂದೆ ಈ ಸಂಸ್ಥೆಯ ಅಧ್ಯಕ್ಷರಾದ ವಿರೇಶ ಸಂಬಣ್ಣವರ ಅವರ ಕಾರ್ಯ ಮಹತ್ವದ ವಾಗಿದೆ.. ಇಂಜಿನಿಯರ್ ಪದವಿ ಪಡೆದು ದೇಶ ವಿದೇಶದಲ್ಲಿ ವ್ಯಾಸಂಗ ಮಾಡಿರುವ ಇವರು ಸಂಸ್ಥೆಯ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ ಈ ಸಂಸ್ಥೆಯ ಎಲ್ಲ ನಿರ್ದೇಶಕರು ಹಾಗೂ ಪಟ್ಟಣದ ಎಲ್ಲ ಹಿರಿಯರು ಸಂಸ್ಥೆಯ ಶಿಕ್ಷಕ ಬಳಗ ಕೈ ಜೋಡಿಸಿದೆ …

ಅಲ್ಲದೇ ಶಾಲೆಯಲ್ಲಿ ವೃತ್ತಿ ಶಿಕ್ಷಣ, ದೈಹಿಕ ಶಿಕ್ಷಣ, ವಿಜ್ಞಾನ ಮತ್ತು ಕಂಪ್ಯೂಟರ್ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ವಿಶೇಷ ಆಸಕ್ತಿ ಮೂಡಿಸುವ ನೆಚ್ಚಿನ ಶಿಕ್ಷಕರ ತಂಡವಿದೆ.ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಚಿತ್ರಕಲೆಯು ಗಮನ ಸೆಳೆಯುತ್ತಿದೆ. ಕ್ರೀಡೆಯಲ್ಲಿ ಭಾಗವಹಿಸಿ ಮತ್ತು ಜಿಲ್ಲಾ ಮಟ್ಟದ ಹತ್ತಾರು ಪ್ರಶಸ್ತಿಗಳು ಶಾಲೆಯಲ್ಲಿ ನೋಡುಗರ ಗಮನ ಸೆಳೆಯುತ್ತಿವೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಈಗಾಗಲೇ ದೈಹಿಕ, ವೃತ್ತಿ ಶಿಕ್ಷಣಕ್ಕೆ ಉತ್ತೇಜನ, ವಿಜ್ಞಾನ ಮತ್ತು ಸಮಾಜಕ್ಕೆ ಪ್ರತ್ಯೇಕ ಪ್ರಯೋಗಾಲಯ, ಆಡಿಯೋ ವಿಜ್ಯುವಲ್ ಪ್ರೊಜೆಕ್ಟ್ ರ ಕೊಠಡಿ, ವಿಶಾಲವಾದ ಆಟದ ಮೈದಾನ ಹಾಗೂ ಬಯಲು ರಂಗಮಂದಿರ ಮತ್ತು ಶಾಲೆಯ ಸುತ್ತಮುತ್ತಲು ಕೌಂಪೌಂಡು ವ್ಯವಸ್ಥೆ ಇದೆ

—————————————-++

ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ದಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರಿ ಆಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸೃಜನಾತ್ಮಕ ಚಿಂತನೆ ಮತ್ತು ಆವಿಷ್ಕಾರದ ಶಿಕ್ಷಣಕ್ಕೆ ಲ್ಯಾಬ್ ಉತ್ತೇಜನ ನೀಡಲಿದೆ. ಕೇಂದ್ರ ಸರಕಾರ ಮತ್ತು ನೀತಿ ಆಯೋಗದ ತಂಡಕ್ಕೆ ನಮ್ಮ ಶಾಲೆಯಿಂದ ತುಂಬು ಹೃದಯದ ಧನ್ಯವಾದ.

-ಸಿ ಕೆ ಗುರುವಣ್ಣವರ
ಕಲ್ಮೇಶ್ವರ ಪ್ರೌಡಶಾಲೆಯ ಪ್ರಾಚಾರ್ಯರು

———————-_————

ಸ್ಪರ್ಧಾತ್ಮಕ ಯುಗದ ತಂತ್ರಜ್ಞಾನಕ್ಕೆ ಎಟಿಎಲ್ ಲ್ಯಾಬ್ ಅನುಕೂಲ ಆಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಜೊತೆ ತಂತ್ರಜ್ಞಾನದ ಅರಿವಿಗೆ ಲ್ಯಾಬ್‍ನಿಂದ ವೃತ್ತಿ ಮತ್ತು ಉದ್ಯೋಗ ಸೃಷ್ಟಿಯ ಶಿಕ್ಷಣ ಸಿಗಲಿದೆ. ರಾಜ್ಯದ ಪ್ರತಿಯೊಂದು ಸರಕಾರಿ ಪ್ರೌಢಶಾಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಎಟಿಎಲ್ ಯೋಜನೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ.

-ವಿರೇಶ ಸಂಬಣ್ಣವರ
ಅಧ್ಯಕ್ಷ ಎಸ್ ಕೆ ಇ ಎಸ್ ಕಮೀಟಿ ಎಂ ಕೆ ಹುಬ್ಬಳ್ಳಿ.

 

ಅಟಲ್ ಟಿಂಕರಿಂಗ್ ಲ್ಯಾಬ್ ಉಧ್ಘಾಟನೆ ಕಾರ್ಯಕ್ರಮ
ಆಗಸ್ಟ್ 23ರಂದು ಮಧ್ಯಾಹ್ನ 3 ಗಂಟೆ ಎಂ.ಕೆ ಹುಬ್ಬಳ್ಳಿಯ ಕಲ್ಮೇಶ್ವರ ಸಭಾಂಗಣ ಉಧ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಉಧ್ಘಾಟಕರಾಗಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಹಾಗೂ ಕಿತ್ತೂರು ಶಾಸಕ
,ಮಹಾಂತೇಶ ದೊಡ್ಡಗೌಡರ ಆಗಮಿಸುತ್ತಿದ್ದಾರೆ.
ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿರೇಶ ಸಂಬಣ್ಣವರ ಅಧ್ಯಕ್ಷತೆವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೈಲಹೊಂಗಲ ಶಾಸಕ
ಮಹಾಂತೇಶ್ ಕೌಜಲಗಿ ಹಾಗೂ ಶಾಸಕರಾದ ಅರುಣ್ ಶಹಾಪುರ, ಹನುಮಂತ ನಿರಾಣಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಗಮಿಸುತ್ತಿದ್ದಾರೆ

Don`t copy text!