ಶೈಕ್ಷಣಿಕ ಹಾಗೂ ರಾಜಕೀಯ ಬೆಳವಣಿಗೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ – ಶಾಸಕ ಹಿಟ್ನಾಳ

ಮಸ್ಕಿಯಲ್ಲಿ ಕನಕಭವನ ನಿರ್ಮಾಣಕ್ಕೆ ಚಾಲನೆ
ಶೈಕ್ಷಣಿಕ ಹಾಗೂ ರಾಜಕೀಯ ಬೆಳವಣಿಗೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ – ಶಾಸಕ ಹಿಟ್ನಾಳ

e-ಸುದ್ದಿ, ಮಸ್ಕಿ

ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.

ಮಸ್ಕಿ ಪಟ್ಟಣದ ಕವಿತಾಳ ರಸ್ತೆಯಲ್ಲಿ ₹ 1‌ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನಕ ಭವನ ನಿರ್ಮಾಣದ ಭೂಮಿ‌ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಕನಕ ಭವನ ನಿರ್ಮಾಣ ವಾಗಬೇಕು, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಈ‌ ಭವನಗಳು ಬಳಕೆಯಾಗಬೇಕು, ಎಲ್ಲಾ ಸಮಾಜದ ಸಹಕಾರದಿಂದ ಸಮಾಜದ ಅಭಿವೃದ್ದಿಗೆ ಪ್ರಯತ್ನಿಸಬೇಕು, ಸಮಾಜದ ಅಭಿವೃದ್ಧಿಗೆ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅವಶ್ಯ ಎಂದರು.
ಶಾಸಕ ಆರ್. ಬಸನಗೌಡ ಮಾತನಾಡಿ ಮಸ್ಕಿಯಲ್ಲಿ ನಿರ್ಮಾಣವಾಗಲು ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದರು.


ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ಮಸ್ಕಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಯಾಗಿದ್ದ ಬಿ‌.ಎಸ್. ಯಡಿಯೂರಪ್ಪ ಅವರು ₹ 1 ಕೋಟಿ ಹಾಗೂ ತುರ್ವಿಹಾಳ ಪಟ್ಟಣಕ್ಕೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಮಾದಯ್ಯ ಸ್ವಾಮೀಜಿ, ನಾಗಯ್ಯ ತಾತ, ಮಾದಯ್ಯ ತಾತ, ಸೇರಿದಂತೆ ಅನೇಕ ಮಠಾದೀಶರು ಇದ್ದರು.
ಮುಖಂಡ ರಾಜಶೇಖರ ಹಿಟ್ನಾಳ,ಬಮಾಜಿ ಸಂಸದ ಕೆ. ವೀರುಪಾಕ್ಷಪ್ಪ, ಕೆ. ಕರಿಯಪ್ಪ, ದೊಡ್ಡಬಸವರಾಜ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಶಿವಪುತ್ರಪ್ಪ ವಟಗಲ್, ಹನುಮಂತಪ್ಪ ಮುದ್ದಾಪೂರ, ಎಚ್. ಬಿ.ಮುರಾರಿ,‌ ಮಲ್ಲನಗೌಡ ತುರ್ವಿಹಾಳ,‌ ಅಪ್ಪಾಜಿಗೌಡ ಪಾಟೀಲ್, ಅಂದಾನಪ್ಪ ಗುಂಡಳ್ಳಿ,‌ ಶಿವಣ್ಣ ನಾಯಕ, ಭಗವಂತಪ್ಪ ನಾಯಕ, ಶ್ರೀಶೈಲಪ್ಪ ಬ್ಯಾಳಿ, ಮಲ್ಲನಗೌಡ ಸುಂಕನೂರು, ಮಲ್ಲಯ್ಯ ಅಂಬಾಡಿ, ಮಳ್ಳಪ್ಪ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ, ಬಸನಗೌಡ ಪೊಲೀಸ್ ಪಾಟೀಲ್, ಭೀಮಣ್ಣ ವಕೀಲ, ನಿರುಪಾದೆಪ್ಪ ವಕೀಲ, ಎಂ. ಈರಣ್ಣ, ಎಪಿಎಂಸಿ ಅಧ್ಯಕ್ಷ ಮಲ್ಲರೆಡ್ಡೆಪ್ಪ ಸೇರಿದಂತೆ ಇತರರು ಇದ್ದರು.

Don`t copy text!