ಮಸ್ಕಿ : ಸಾಮೂಹಿಕ ಜನಿವಾರಧಾರಣೆ – ಪಲ್ಲಕ್ಕಿ ಸೇವೆ

ನೂಲ ಹುಣ್ಣಿಮೆ ಆಚರಣೆ
ಮಸ್ಕಿ : ಸಾಮೂಹಿಕ ಜನಿವಾರಧಾರಣೆ – ಪಲ್ಲಕ್ಕಿ ಸೇವೆ

e-ಸುದ್ದಿ, ಮಸ್ಕಿ

ಮಸ್ಕಿ : ನೂಲ ಹುಣ್ಣಿಮೆ ನಿಮಿತ್ತ ಪಟ್ಟಣದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಾಮೂಹಿಕ ಜನಿವಾರಧಾರಣೆ ಹಾಗೂ ಪಲ್ಲಕ್ಕಿ ಸೇವೆ ಕೊವಿಡ್ ನಿಯಮ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಬೆಳಿಗ್ಗೆ ಮಾರ್ಕಂಡೇಶ್ವರರ ಶಿಲಾ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ರಾಘವೇಂದ್ರ ಆಚಾರ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಭಜನೆ ಇತರೆ ಕಾರ್ಯಕ್ರಮಗಳು ನಡೆದವು.
ನಂತರ ಮಾರ್ಕಂಡೇಶ್ವರರ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯು ದೇವಸ್ಥಾನದ ಸುತ್ತ 5 ಸುತ್ತು ಹಾಕುವ ಮೂಲಕ ಪಲ್ಲಕ್ಕಿ ಸೇವೆ ನಡೆಸಲಾಯಿತು.
ಪದ್ಮಸಾಲಿ ಸಮಾಜದ ಮುಖಂಡರಾದ ಮಲ್ಲಯ್ಯ ಪಗಡೆಕಲ್, ಯಮನಪ್ಪ ದೇವರೆಡ್ಡಿ, ನಾಗರಾಜ ಕರ್ಲಿ, ರಾಘವೇಂದ್ರ ಚಿನ್ನಿ, ವೀರೇಶ ಪೂಜಾರಿ, ಡಾ. ಶಂಕರ ಕರ್ಲಿ, ಪರಶುರಾಮ ಕೊಡಗುಂಟಿ,‌ ಮಲ್ಲಿಕಾರ್ಜುನ ಶ್ಯಾಸಲ್, ವೆಂಕಟೇಶ ದೇವರೆಡ್ಡಿ,‌ ಈರಪ್ಪ ಆಂದೇಲಿ, ಮುನಿಯಪ್ಪ ಕರ್ಲಿ‌ ಸೇರಿದಂತೆ ಸಮಾಜದ ಮುಖಂಡರು ಮಹಿಳೆಯರು ಪಾಲ್ಗೊಂಡಿದ್ದರು.
ನೂಲ ಹುಣ್ಣಿಮೆ ನಿಮಿತ್ತ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿತ್ತು. ನಂತರ ಸಾಮೂಹಿಕವಾಗಿ ಜನಿವಾರ ಧಾರಣೆ ನಡೆಯಿತು.

Don`t copy text!