ಮಸ್ಕಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ನೂತನ ಮಸ್ಕಿ ತಾಲೂಕು ಘಟಕ ಅಧ್ಯಕ್ಷರಾಗಿ ಶಿವಣ್ಣ (ಪ್ರಥಮ ದರ್ಜೇ ಸಹಾಯಕ) ಇವರನ್ನು ಜಿಲ್ಲಾಧ್ಯಕ್ಷ ಹಂಪಯ್ಯ ಪಾಟೀಲ್ ಮಂಗಳವಾರ ಪಟ್ಟಣದ ಹಳೆ ಪುರಸಭೆ ಕಚೇರಿಯ ಆವರಣದಲ್ಲಿ ಆಯ್ಕೆ ಮಾಡಿದರು.
ಹಂಪಯ್ಯ ನಾಯಕ ಮಾತನಾಡಿ ಪೌರಸೇವಾ ಸಂಘವನ್ನು ನೌಕರರ ಹಿತದೃಷ್ಠಿಯಿಂದ ಅಸ್ಥಿತ್ವಕ್ಕೆ ತರಲಾಗಿದೆ. ಪ್ರತಿಯೊಬ್ಬ ಪೌರಸೇವಾ ನೌಕರರು ಸಂಘದ ಹಿತಕ್ಕಾಗಿ ದುಡಿಯಬೇಕು. ರಾಜ್ಯದಲ್ಲಿ ಪೌರಸೇವಾ ನೌಕರರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಪರಿಹರಿಸಲು ಸಂಘಟನೆ ಬಹಳ ಮುಖ್ಯವಾಗಿದೆ. ಆದ್ದರಿಂದ ನೌಕರರ ಹಿತಕ್ಕಾಗಿ ಇಂದು ಮಸ್ಕಿ ತಾಲೂಕು ಘಟಕವನ್ನು ರಚಿಸಲಾಗಿದೆ ಎಂದರು.
ನೇಮಕ: ಮಸ್ಕಿ ತಾಲೂಕು ಘಟಕದ ಕರ್ನಾಟಕ ಪೌರಸೇವಾ ವಣಕರರ ಸಂಘದ ಗೌರವ್ಯಾಧ್ಯಕ್ಷರಾಗಿ ಜಗದೀಶ್, ಅಧ್ಯಕ್ಷರಾಗಿ ಶಿವಣ್ಣ, ಉಪಾಧ್ಯಕ್ಷರನ್ನಾಗಿ ರಾಮಸ್ವಾಮಿ ಹಾಗೂ ಪಾಮಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಮ್ಮ, ಕಾನೂನು ಸಲಹೆಗಾರ ರಾಘವೇಂದ್ರ ಮುತಾಲಿಕ್ ಸಹ ಕಾರ್ಯದರ್ಶಿ ದೊಡ್ಡ ಮೌನೇಶ, ಖಜಾಂಚಿ ಕುಮಾರ್, ಸಾಂಸ್ಕøತಿಕ ಕಾರ್ಯದರ್ಶಿ ಸಣ್ಣ ಮೌನೇಶ ಹಾಗೂ ಜಿಲ್ಲಾ ನಿರ್ದೇಶಕರನ್ನಾಗಿ ಸತ್ಯನಾರಾಯಣ, ಜಿ.ನಾಗರಾಜ, ಸಂತೋಷ, ಶಿವರಾಜ ಕಟ್ಟಿಮನಿ ಇವರನ್ನು ನೇಮಕ ಮಾಡಿದರು.