ಪ್ರಗತಿಪರ ಸಂಘಟನೆಗಳಿಂದ  ಮಾನ್ಪಡೆಯವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಮಸ್ಕಿ : ಪಟ್ಟಣದ ಮುದಗಲ್ ಕ್ರಾಸ್ ಹತ್ತಿರ ಅಶೋಕ ವೃತ್ತದಲ್ಲಿ ಮಸ್ಕಿ ತಾಲೂಕು ಪ್ರಗತಿಪರ ಸಂಘಟನೆ ವತಿಯಿಂದ ಬುಧವಾರ ಅಪ್ರತಿಮ ಹೋರಾಟಗಾರ ರೈತ ನಾಯಕ ಮಾರುತಿ ಮಾನ್ಪಡೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಗತಿಪರ ಸಂಘಟನೆಯ ಮುಖಂಡ ಅಶೋಕ ಮುರಾರಿ ಮಾತನಾಡಿ ಮಾನ್ಪಡೆಯವರು ಶೋಷಿತರ ದ್ವನಿಯಾಗಿದ್ದರು. ರಾಜ್ಯದಲ್ಲಿ ರೈತರ ಅನ್ಯಾಯವಾದಗ ರೈತರ ದ್ವನಿಯಾಗಿ ನಿಲ್ಲುತ್ತಿದ್ದರು. ದೇವದಾಸಿ ಹಾಗೂ ಬಡವರು ಶೋಷಣೆಗೆ ಒಳಗಾದರ ಪರವಾಗಿ ಗಟ್ಟಿ ದ್ವನಿಯಾಗಿದ್ದರು ಎಂದರು.


ಪ್ರಗತಿಪರ ಸಂಘಟನೆಯ ಮುಖಂಡರಾದ ಬಸವರಾಜ ಎಕ್ಕಿ, ತಾಪಂ ಸದಸ್ಯ ರಾಮಣ್ಣ ಉದ್ಬಾಳ್, ಬವರಾಜ ಉದ್ಬಾಳ್, ಸಂತೋಷ ಹಿರೇದಿನಿ, ್ನರೈತ ಮುಖಂಡ ನಾಗರಡ್ಡಿ ಬುದ್ದಿನ್ನಿ, ವೀಜಯ ಬಡಿಗೇರ್, ಸಿದ್ದು ಮುರಾರಿ, ಮಹಿಬೂಬ್ ಕುಷ್ಟಗಿ, ದೇವರಾಜ ಮಡಿವಾಳ್ ಗಂಗಾಧರ ಮುರಾರಿ ಸೇರಿದಂತೆ ಇತರರು ಇದ್ದರು.

Don`t copy text!