ಮಸ್ಕಿ : ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಮಾಡಿದ್ದನ್ನು ರದ್ದು ಮಾಡಿ ಗೊಲ್ಲ ಸಮಾಜ ಅಭಿವೃದ್ಧಿ ನಿಗಮ ಎಂದು ಸ್ಥಾಪನೆ ಮಾಡುವಂತೆ ಮಸ್ಕಿ ತಾಲೂಕು ಯಾದವ ಸಮಾಜದ ಅಧ್ಯಕ್ಷ ಹನುಮೇಶ ನೀರಲೂಟಿ ಒತ್ತಾಯ ಮಾಡಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸೀಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ಮಾಡಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಡುಗೊಲ್ಲ ಎಂಬುದು ದಕ್ಷಿಣ ಭಾಗದಲ್ಲಿ ಮಾತ್ರ ಇದೆ. ಉತ್ತರ ಕರ್ನಾಟಕದಲ್ಲಿ ಗೊಲ್ಲ ಸಮಾಜ ಅಥವಾ ಯಾದವ ಸಮಾಜ ಎಂದು ಕರೆಯುವ ಪದ್ದತಿ ಇದೆ. ಹಾಗಾಗಿ ಗೊಲ್ಲ ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗೊಲ್ಲ ಸಮಾಜದ ಯುವಕರಾದ ಬಾಲಪ್ಪ ಮಾರಲದಿನ್ನಿ, ಛತ್ರಪ್ಪ ಮ್ಯಾದರಾಳ, ಮಲ್ಲೇಶ್ ಯಾದವ, ಅಮರೇಶ ಬೆಂಚ್‍ಮಟ್ಟಿ, ಗಣೇಶ ಯಾದವ್, ಸಿದ್ದಪ್ಪ ಯಾದವ್, ಶೇಖರಪ್ಪ ತಿಮ್ಮಾಪೂರ ಇದ್ದರು.