ಅಟಲ್ ಟಿಂಕರಿಂಗ್ ಲ್ಯಾಬ್ ಉಧ್ಘಾಟನೆ
e- ಸುದ್ದಿ ಬೈಲಹೊಂಗಲ
ವರದಿ:ಉಮೇಶ ಗೌರಿ (ಯರಡಾಲ)
ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿಯ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಸುಮಾರು ರೂ.12 ಲಕ್ಷ ವೆಚ್ಚದಲ್ಲಿ . ಇನೊವೇಟಿವ್ ಮತ್ತು ಮೇಕ್ ಇನ್ ಇಂಡಿಯಾ . ಪರಿಕಲ್ಪನೆಯಿಂದ ತಯಾರಿಸಿದ ಪ್ರಧಾನಿ ಅವರ ಮಹತ್ವದ ಯೋಜನೆ ಅಟಲ್ ಟಿಂಕರಿಂಗ್ ಲ್ಯಾಬ್ ಉಧ್ಘಾಟನೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಉಧ್ಘಾಟಸಿ ಮಾತನಾಡಿದ ಅವರು
ಅಟಲ್ ಟಿಂಕರಿಂಗ್ ಲ್ಯಾಬ ವಾಜಪೇಯಿ ಕಂಡ ಕನಸನ್ನು ಈಗೀನ ಪ್ರದಾನಿ ನೆನಸು ಮಾಡಿದ್ದಾರೆ ನಮ್ಮ ಕ್ಷೇತ್ರದಲ್ಲಿ ಮೂರು ಶಾಲೆಯಲ್ಲಿ ಲ್ಯಾಬಗಳು ಪ್ರಾರಂಭವಾಗಿವೆ ಆದರೆ ಕಲ್ಮೇಶ್ವರ ಪ್ರೌಢಶಾಲೆ ವ್ಯವಸ್ಥಿತವಾಗಿ ಲ್ಯಾಬ್ ಸಿದ್ದಪಡಿಸಿರುವುದು ನಮ್ಮ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಎಂದರು
ಮುಖ್ಯ ಅತಿಥಿಗಳಾದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದರ ಜೊತೆಗೆ ಇಂತಹ ಲ್ಯಾಬಗಳಿಂದ ಒಳ್ಳೆಯ ಶಿಕ್ಷಣ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದವರು.
ವಿಧಾನ ಪರಿಷತ್ತ್ ಶಾಸಕ ಹಣಮಂತ ನಿರಾಣಿ ಸಸಿ ನೆಡುವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಣಣ ಬದಲಾವಣೆ ಆಗಬೇಕು ಎಟಿಎಲ್ ಲ್ಯಾಬ್ ಹಲವಾರು ವಿದ್ಯಾರ್ಥಿಗಳಿಗೆ ಲಾಭ.
ಉತ್ತಮ ಶಿಕ್ಷಣ ನೀಡುವ ಇಂತಹ ಶಿಕ್ಷಣ ಸಂಸ್ಥೆಗಳಿಗೆ ಸದಾ ಸಹಕಾರ ನೀಡುತ್ತೇನೆ. ಇಗಾಗಲೇ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡಲು ತಿರ್ಮಾನಿಸಿದ್ದೇನೆ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಶಿಕ್ಷಕರು ಗುರುಭವನ ಕಟ್ಟುತ್ತಿರುವುದಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಕುರಿತು ಉಪನ್ಯಾಸ ನೀಡಿದ ವಿಧಾನ ಪರಿಷತ್ ಶಾಸಕ ಅರುಣ ಶಹಾಪುರ ಮಾತನಾಡಿ ಇಂದು ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದೆ.
ಈ ದೇಶದಲ್ಲಿ ಭಾರತೀಯತೆಯ ಶಿಕ್ಷಣವನ್ನು ಜಾರಿಗೆ ತರಬೇಕು. ಆ ಶಿಕ್ಷಣದಲ್ಲಿ ಕೌಶಲ್ಯದ ಜೊತೆಗೆ ವೃತ್ತಿಪರ ಶಿಕ್ಷಣ ನೀಡುವುದಾಗಿದೆ.
ಒಂದು ಮಗು ತನ್ನ ಮೂರು ವರ್ಷದಲ್ಲಿ ಶಿಕ್ಷಣವನ್ನು ಪಡೆಯಲು ಶಾಲೆಗೆ ಹೋಗಬೇಕು. ಆ ಮಗು ಒಂದು ವಸ್ತುವನ್ನು ನೋಡುತ್ತಾ ಶಿಕ್ಷಣ ಪಡೆಯಬೇಕು. ಈ ಶಿಕ್ಷಣವನ್ನು ನೀಡಬೇಕಾದ ಶಿಕ್ಷಕರು ಬದಲಾಗಬೇಕು. ಅದಕ್ಕೋಸ್ಕರ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುತ್ತಿದ್ದೆ. ಶಿಕ್ಷಕರು ಮಕ್ಕಳಿಗೆ ಜೀವನ ನಡೆಸಲು ಬೇಕಾಗಿರುವ ಕೌಶಲ್ಯವನ್ನು ಕಲಿಸಿ ಕೊಡುವ ರೀತಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲ್ಪಿಸಲಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಗುಣಮಟ್ಟದ ಶಿಕ್ಷಣ ಕೊಡುವುದಕ್ಕೋಸ್ಕರ ಸಿದ್ದಗೊಳಿಸಲು ಈ ನೀತಿ ಸಾಧ್ಯವಾಗಲಿದೆ. ಇದು ಯಾವುದೇ ಖಾಸಗಿ , ಸರ್ಕಾರಿ ,ಅನುದಾನಿತ ಶಾಲೆಗಳಿಗೆ ಮಾರಕವಲ್ಲ ಅದು ಪೂರಕವಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಸ್ವಯಂ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆ. ದೇಶ ಪ್ರಗತಿಯತ್ತ ಸಾಗಲಿದೆ ಎಂದು ಹೇಳಿದರು.
ಎಸ್ ಕೆ ಇ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಶ ಸಂಬಣ್ಣವರ ಮಾತನಾಡಿದ ಅವರು ನಮ್ಮ ಸಂಸ್ಥೆ ಬೆಳವಣಿಗೆ. ಹಲವಾರು ಶಾಸಕರ,ಸಂಸದರ,ಸಹಾಯ ಹಸ್ತದಿಂದ ಹೆಮ್ಮರವಾಗಿ ಬೆಳೆದು ನಿಂತಿದ್ದೆ ಎಂದು ಸ್ಮರಣಿಸಿದರು.
ಪ್ರಾಸ್ತಾವಿಕ ಜಿ ಎಸ್ ಹಲಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ವೇಳೆ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಟಿ ಬಳೆಗಾರ ಹಾಗೂ ಬೆಳಗಾವಿ ಡಯಟಿನ ಕುಸಗಲ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ಕಸಾಪ ಅಧ್ಯಕ್ಷ ಡಾ: ಶೇಖರ ಹಲಸಿಗಿ ಶಂಕರ ಕಿಲ್ಲೇದಾರ,ಲಕ್ಷ್ಮಣ ಗೋಕಾರ, ರಾಜು ಮುತ್ನಾಳ, ಬಸವರಾಜ ಡೂಗನವರ, ಬಸಪ್ಪ ಕರವಿನಕೊಪ್ಪ, ಗುರಪ್ಪ ಗಡ್ಡಿ, ಚಿನ್ನಪ್ಪ ಮುತ್ನಾಳ, ಕಲ್ಲಪ್ಪ ಸಂಬಣ್ಣವರ, ಡಾ: ಜಗದೀಶ ಹಾರುಗೂಪ್ಪ ರಾಜಕುಮಾರ್ ಮುತ್ನಾಳ ,ಅರುಣ ರಾಹುತ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು,ಶಿಕ್ಷಕ ವೃಂದ ಸೇರಿದಂತೆ ಪಟ್ಟಣದ ಅನೇಕ ಗ್ರಾಮಸ್ಥರಿದ್ದರು.
ಈ ಕಾರ್ಯಕ್ರಮವನ್ನು ವಿಜಯ ರಾಹುತ ಹಾಗೂ ಜಿ ಆರ್ ಪೂಜೇರ ನಿರ್ವಹಿಸಿದರು