ಯುವಕರಿಗೆ ಕುಮಾರರಾಮ ಆದರ್ಶವಾಗಲಿ-ಪ್ರತಾಪಗೌಡ ಪಾಟೀಲ

ಯುವಕರಿಗೆ ಕುಮಾರರಾಮ ಆದರ್ಶವಾಗಲಿ-ಪ್ರತಾಪಗೌಡ ಪಾಟೀಲ

e-ಸುದ್ದಿ, ಮಸ್ಕಿ

ಕುಮಾರರಾಮ ಧೀರ ಯುವಕನಾಗಿದ್ದ ಪರನಾರಿಯರನ್ನು ಸಹೋದರಿಯಂತೆ ಕಂಡ ಅಪ್ರತಿಮ ಯುವಕನಾಗಿದ್ದ ಇಂದಿನ ಯುವಕರು ಕುಮಾರರಾಮನನ್ನು ಆದರ್ಶವಾಗಿಟ್ಟು ಕೋಳ್ಳಬೇಕೆಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ತಾಲೂಕಿನ ಹೂವಿನಬಾವಿ ಗ್ರಾಮದ ಗವಿಸಿದ್ದೇಶ್ವರ ದೇವಸ್ಥಾನ ಹತ್ತಿರದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ‌ ಮಾತನಾಡಿದರು.
ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಜೆಪಿಯ ಎಲ್ಲ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮುಂಬರುವ ತಾ.ಪಂ.ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕರೆ ನೀಡಿದರು.
ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಹಾಗೂ ಮುಖಂಡರಾದ ವಿಶ್ವನಾಥ ರೆಡ್ಡಿ ಅಮೀನಗಡ ಸಂತೋಷ ರಾಜುಗುರು ಮಾತನಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಮಲ್ಲಿಕಾರ್ಜುನ ಯಾದವ್ ಬಿಜೆಪಿ ಮುಖಂಡರಾದ ಚಂದ್ರಕಾಂತ ಗೂಗೆಬಾಳ ಶಿವಕುಮಾರ್ ವಟಗಲ್ ಅಮರೇಗೌಡ ಚಿಲ್ಕರಾಗಿ ಬಸವರಾಜಸ್ವಾಮಿ ಹಸಮಕಲ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಪ್ರಮುಖ ಮುಖಂಡರು ಬೂತ್ ಅಧ್ಯಕ್ಷರು ವಿವಿಧ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ..

Don`t copy text!