ಗೌಡೂರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ (A.N.M CENTER) ಮಂಜೂರು ಮಾಡುವಂತೆ ಸಂಸದರಿಗೆ ಮನವಿ.
e-ಸುದ್ದಿ, ಲಿಂಗಸುಗೂರು
ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕರವರಿಗೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರ ಜನಸಂಖ್ಯೆ ಇದ್ದು ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ನಿರ್ಮಾಣ ಮಾಡುವಂತಹ ಎಲ್ಲಾ ಅರ್ಹತೆಗಳು ಇವೆ. ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಆರೋಗ್ಯ ಕೇಂದ್ರದ ಸೌಲಭ್ಯ ಗ್ರಾಮದ ಜನತೆಗೆ ಮರಿಚಿಕೆಯಾಗಿದೆ. ವಿವಿಧ ಅಪಘಾತ ಅವಘಡಗಳು ಸಂಭವಿಸಿದರೆ,ಹೆರಿಗೆಗೆ, ವಯಸ್ಸಾದವರ ಸೇರಿದಂತೆ ಇತರಿರಿಗೆ ತುರ್ತು ಚಿಕಿತ್ಸಾ ಪಡೆಯಬೇಕು ಎಂದರೆ ಆರೇಳು-ಕಿ.ಮಿ ಗಟ್ಟಲೇ ಗುರುಗುಂಟಾ ಇಲ್ಲವೇ ಹುಟ್ಟಿ ಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದು ಆದಷ್ಟು ಬೇಗನೆ ಗ್ರಾಮಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವು ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ಆದಷ್ಟು ಬೇಗನೆ ಮಂಜೂರು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೆಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಶಂಕರಗೌಡ ಪೋಲೀಸ್ ಪಾಟೀಲ್, ರಾಚಯ್ಯ ಸ್ವಾಮಿ ಗಣಾಚಾರಿ, ಮಹದೇವಯ್ಯ ಸ್ವಾಮಿ,ತಿಮ್ಮನ ಗೌಡ ಪೋಲೀಸ್ ಪಾಟೀಲ್, ಚಂದ್ರಯ್ಯ ಕುಲ್ಲುರು, ಸಿದ್ದೇಶ ಮಾಸರೆಡ್ಡಿ, ಮಲ್ಲಣ್ಣ ಕೋಳುರು, ಸೇರಿದಂತೆ ಹಲವಾರು ಹಿರಿಯ ಮುಖಂಡರು ಗ್ರಾಮಸ್ಥರು ಪಾಲ್ಗೊಂಡಿದ್ದರು.