ಐತಿಹಾಸಿಕ ಸಿದ್ದನಕೊಳ್ಳ ಪ್ರವಾಸಿ ತಾಣ
ಸ್ಥಳ ಪರಿಚಯ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಬರುವ ಸಿದ್ದೇಶ್ವರ ದೇವಸ್ಥಾನ (ಸಿದ್ದನಕೊಳ್ಳ ,ಕಲ್ಯಾಣಿ, ಪುಷ್ಕರಣಿ) ಎಂದು ಪ್ರಸಿದ್ಧಿ ಪಡೆದ ಸ್ಥಳ ಬೆಳಗಾವಿ ನಗರದಿಂದ ಸುವರ್ಣ ಸೌದಧ ಪಕ್ಕದ ರಸ್ತೆಯ ಮೂಲಕ ಮರಕಟ್ಟಿ ,ಮೊದಗಾ,ಗಣಿಕೊಪ್ಪ ಗ್ರಾಮಗಳ ನಡುವೆ ಇರುವ ಐತಿಹಾಸಿಕ ಸ್ಥಳವೇ “ಸಿದ್ದನಕೊಳ್ಳ”
ಬೆಳಗಾವಿ ನಗರದಿಂದ ೧೫ ಕೀ.ಮೀ ಹಿರೇಬಾಗೇವಾಡಿಯಿಂದ ೬ ಕೀ ಮೀ ,ಮೊದಗಾ ಗ್ರಾಮದಿಂದ ೬ ಕೀ ಮೀ ಮತ್ತು ಮರಕಟ್ಟಿ ಹಾಗೂ ಗಣಿಕೊಪ್ಪ ಗ್ರಾಮಗಳ ಮಧ್ಯೆ ೧ ಕೀ ಮೀ ಅಂತರದಲ್ಲಿ ಎಲೆ ಮರೆಕಾಯಿಯಂತಿರುವ ಸ್ಥಳ,ಇದು ಎತ್ತರದ ಪ್ರದೇಶಕ್ಕೆ ಹೊಂದಿಕೊಂಡಂತೆ “ಸಿದ್ದನಕೊಳ್ಳ” ತೆಗ್ಗು ಪ್ರದೇಶದಲ್ಲಿದೆ.
ನಾಲ್ಕು ರಸ್ತೆಗಳು ಸಂದಿಸುವ ರಸ್ತೆಯ ಪಕ್ಕಕ್ಕೆ ಒಂದು ದೊಡ್ಡದಾದ “ಶ್ರೀ ಸಿದ್ದೇಶ್ವರ ದೇವಸ್ಥಾನ ಗಣಿಕೊಪ್ಪ” ಎನ್ನುವ ನಾಮಪಲಕ ನಮ್ಮನ್ನು ಸ್ವಾಗತ ಮಾಡುತ್ತದೆ,ಮಳೆಗಾಲದಲ್ಲಿ ಸುತ್ತಲೂ ಹಸಿರಿನಿಂದ ಕೂಡಿದ ಭೂಮಿ ತಾಯಿಯ ಪ್ರಕೃತಿಯ ಸೊಬಗು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ, ಮೊದಲನೆಯದಾಗಿ ಇಲ್ಲಿ ಒಂದು ಬೃಹದಾಕಾರದ ಎಣ್ಣೆ ಸುರಿದು ಪೂಜೆ ಮಾಡಿರುವ ನಂದಿ ಕಲ್ಲು (ದೇವರ ಕಲ್ಲು) ಸಿಗುತ್ತದೆ, ಈ ಸ್ಥಳಕ್ಕೆ ಬರುವ ಗ್ರಾಮಸ್ಥರು,ಭಕ್ತಾದಿಗಳು ನಂದಿ ಕಲ್ಲಿಗೆ ಎಣ್ಣೆ ಸುರಿದು ಒಳ ನಡೆಯುತ್ತಾರೆ,ಇದರ ಪಕ್ಕದಲ್ಲಿರುವುದೆ ಐತಿಹಾಸಿಕ ಹಿನ್ನೆಲೆ ಹಾಗೂ ಪುರಾತನ ಇತಿಹಾಸವನ್ನು ಹೊಂದಿರುವ ಸ್ಥಳವೇ ಆಡುಭಾಷೆಯಲ್ಲಿ “ಸಿದ್ದನಕೊಳ್ಳ” (ಕಲ್ಯಾಣಿ, ಪುಷ್ಕರಣಿ) ಎಂದು ಕರೆಯುತ್ತಾರೆ.
ಈ ಒಂದು ಸ್ಥಳದಲ್ಲಿ ದಟ್ಟವಾದ ಕಾಡಿತ್ತು ಇಲ್ಲಿ ಮಹಾನ ಸಾದು ಸಂತರು ತಪಸ್ವಿಗಳು ತಮ್ಮ ಮುಕ್ತಿ ಸಾಧನೆಗಾಗಿ ಹಾಗೂ ಕೋಕ ಕಲ್ಯಾಣಕ್ಕಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡದ್ದಿರಬಹುದು,ಅಲ್ಲದೆ ಇಲ್ಲಿ ಒಬ್ಬರು ಮಹಾನ್ ತಪಸ್ವಿಯಾದ ಸಿದ್ದೇಶ್ವರರು ತಮ್ಮ ದೈನಂದಿನ ಜಪ,ತಪ ಹಾಗೂ ಸಿದ್ದಿಗಾಗಿ ಪ್ರಶಾಂತವಾದ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡದ್ದಕ್ಕಾಗಿ “ಸಿದ್ದನಕೊಳ್ಳ” ಎಂಬ ಹೆಸರು ಬರಲುಕಾರಣವಾಗಿದೆ.
ಇದು ಪ್ರಾಚೀನ ವಾಸ್ತುಶಿಲ್ಪ ಕಲೆ ಒಳಗೊಂಡಿರುವ “ಪುಷ್ಕರಣಿ “ಯು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ.
ಈ ಒಂದು ಪುಷ್ಕರಣಿಯ ಮಹಾ ಮಂಟಪದ ಸೂರ್ಯದಯವಾಗುವ ಕಡೆಗೆ ಮಹಾದ್ವಾರದ ಗರ್ಭಾಂಕಣವಿದೆ,ಅಲ್ಲದೆ ಎಡ ಬದಿಗೆ ಎರೆಡು, ಬಲ ಬದಿಗೆ ಎರೆಡು ದ್ವಾರದ ಗೋಪುರಾಕೃತಿಗಳಿವೆ,ವಿಶೇಷ ಎಂದರೆ ಬಲ ಬದಿಗೆ ಪಕ್ಕದ ಕಲ್ಲಿನ ಮೇಲೆ ಗೋಪುರದಲ್ಲಿ ಕೈ ಮುಗಿದು ನಮಸ್ಕರಿಸುವ ಸುಂದರವಾದ ಕಲಾಕೃತಿ ಕಾಣುತ್ತದೆ.
“ಸಿದ್ದನಕೊಳ್ಳ”ದ ಮುಂಭಾಗ ಮತ್ತು ಹಿಂಭಾಗದಲ್ಲಿ ಕೆಳಗಡೆ ಇಳಿಯಲು ಒಂಬತ್ತು ಮೆಟ್ಟಿಲುಗಳಿವೆ ಆದರೆ ಮಳೆಗಾಲದಲ್ಲಿ ನೀರು ತುಂಬಿರುವುದರಿಂದ ನಮಗೆ ಕೇವಲ ಎರೆಡು ಮೆಟ್ಟಿಲುಗಳು ಮಾತ್ರ ನಮಗೆ ಕಾಣುತ್ತವೆ,ವಿಸ್ಮಯಕಾರಿ ಪವಾಡ ಸಂಗತಿ ಎಂದರೆ ಈ ಒಂದು “ಸಿದ್ದನಕೊಳ್ಳ” ನೀರು ಕಡಿಮೆಯಾಗಬಹುದು ಆದರೆ ಎಂದಿಗೂ ಬತ್ತಿದ ಇತಿಹಾಸವೆ ಇಲ್ಲವಂತೆ ಮೊದಲು ಬೀಕರ ಬರಗಾಲ ಬಿದ್ದಾಗ ಸಹಿತ ಸುತ್ತಮುತ್ತಲಿನ ಗ್ರಾಮದ ಜನರ ನೀರುಣಿಸಿದ ಕೊಳ್ಳ ಇದಾಗಿತ್ತಂತೆ ಎಂದು ಹಿರಿಯರು ಹೇಳುತ್ತಾರೆ.
ಈ ಮಹಾ ಮಂಟಪದ ಮಂದೆ ನಿಂತ ನೋಡಿದಾಗ ಒಳಗಡೆ ಎಡ ಹಾಗೂ ಬಲ ಬದಿಗೆ ಮೂರು ಗುಹಾಕೃತಿ ಕೋಣೆಗಳಿರುವುದು ನಮಗೆ ಕಾಣುತ್ತದೆ,ಈ ಕೋಣೆಗಳಲ್ಲಿ ಸಾದು ಸಂತರು ತಪಸ್ಸು ಮಾಡಿರಬಹುದು ಎಂಬ ನಂಬಿಕೆ ಇದೆ ಇದೆ ಅಲ್ಲದೆ ಸಿದ್ಧಲಿಂಗೇಶ್ವರರು ನಿರ್ಮಿಸಿದ “ಶಿವಸಾಲಿ ಗ್ರಾಮ” ವಿದೆ ಅದರ ಮೇಲ್ಭಾಗದಲ್ಲಿ ಸುಂದರವಾದ ಶಿವಪಾರ್ವತಿಯರ ಚಿತ್ರವನ್ನು ಉಬ್ಬುಗೆ ನೆತ್ತಿಯಲ್ಲಿ ರಚಿಸಲಾಗಿದೆ,ಬಲ ಬದಿಗೆ ಒಂದು ಚೌಕಾಕಾರದ ಕಟ್ಟೆ ಇದ್ದು ಇದನ್ನು ತುಳಸಿ ಕಟ್ಟೆ ಎಂದು ಕರೆಯುತ್ತಾರೆ,ಗರ್ಭಾಂಕಣಕ್ಕೆ ಹೊಂದಿಕೊಂಡಂತೆ ಬಕ ಬದಿಯಲ್ಲಿ ವಿಘ್ನೇಶ್ವರ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ಮಂದೆ ವಿಶಾಲವಾದ ಮಹಾ ಮಂಟಪವಿದ್ದು ಮಧ್ಯದಲ್ಲಿ ಮಹಾನಂದಿಯನ್ನು ಪ್ರತಿಷ್ಠಾಪಿಸಲಾಗಿದೆ,ದ್ವಾರ ಭಾಗಿಲಿನ ಎರೆಡು ಗರ್ಭಾಂಕಣಕ್ಕೆ ಹೊಂದಿಕೊಂಡಂತೆ ಒಂದು ಪುಟ್ಟದಾದ ಗರ್ಭಗುಡಿಯಿದ್ದು ಇದಕ್ಕೆ ದ್ವಾರ ಬಾಗಿಲು ಸಹಿತ ಇದ್ದು ಒಳಗಡೆ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ,
ಸುತ್ತಲೂ ಚೌಕಾಕಾರದಿಂದ ಕೊಡಿದ ಮಹಾಮಂಟಪವು ೧೦ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.
ಕದಂಬರು, ರಾಷ್ಟ್ರಕೂಟರು ಈ ಒಂದು ಪ್ರಾಂತ್ಯದಲ್ಲಿ ಈ ಒಂದು ಕೊಳ್ಳದಲ್ಲಿ ಮಹಾಮಂಟವನ್ನು ನಿರ್ಮಿಸಿರಬಹುದು,ಅಲ್ಲದೆ ಮಹಾ ಮಂಟಪದ ಸುಂದರವಾದ ಕಲ್ಲಿನಾಕೃತಿಗಳ ಕಂಬಗಳಲ್ಲಿ ಸಿಂಹಗಳ ಕೆತ್ತನೆ,ಸುಂದರವಾದ ಕೆತ್ತನೆಯ ಕಲಾಕೃತಿಗಳು ಇರುವುದು ಕಂಡುಬರುತ್ತದೆ.
ಅಲ್ಲದೆ ಇನ್ನೂಂದು ಪ್ರತೀತಿ ಎಂದರೆ ಈ ಕೊಳ್ಳ ಸಿದ್ದೇಶ್ವರರ ಕೋಳ್ಳ ಎಂಬುವುದಕ್ಕೆ “ಪುಷ್ಕರಣಿ”ಯ ಹಿಂಭಾಗದಲ್ಲಿ ಕಲ್ಲಿನಿಂದ ಕೆತ್ತಿ ಇಟ್ಟ ಗದ್ದುಗೆಯು ಇದೆ ಮತ್ತು ಪೂರ್ವ ಆಗ್ನೇಯ ಭಾಗದಲ್ಲಿರುವ ಚಿಕ್ಕದಾದ ದ್ವಾರದಲ್ಲಿ ಸಿದ್ದೇಶ್ವರ ಜೀವಂತ ಸಮಾಧಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಗ್ರಾಮದ ಸುತ್ತಮುತ್ತಲಿನ ಹಿರಿಯರು.
ಸಿದ್ದನಕೊಳ್ಳದ ಪಕ್ಕದಲ್ಲಿ ಒಂದು ದೇವಸ್ಥಾನವಿದ್ದು ಇಲ್ಲಿ ಸಾವಿರಾರು ಭಕ್ತರು ತಮಗೆ ಸಂಕಷ್ಟಗಳು ಬಂದರೆ ಪೂಜೆಯನ್ನು ಸಲ್ಲಿಸಿ ತಮ್ಮ ಹರಕೆಯನ್ನು ತಿರಿಸಿ ಹೋಗುತ್ತಾರೆ,ಅಲ್ಲದೆ ಹರಕೆ ತಿರಿದ ನಂತರ ತಮಗೆ ಬಂದ ವಿಪತ್ತಗಳು ಹೋದಾಗ ತಮ್ಮ ಕುಟುಂಬದ ಮಕ್ಕಳಿಗೆ ಸಿದ್ದೇಶ್ವರ, ಸಿದ್ದಣ್ಣ,ಸಿದ್ದಪ್ಪ,ಸಿದ್ದು ಎಂಬ ನಾಮಕರಣ ಮಾಡಿದ ಉದಾಹರಣೆಗಳು ಇವೆ.
ಇದು ಗ್ರಾಮಗಳ ಜನರ ನಂಬಿಕೆಯಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಒಂದು ದೇವಸ್ಥಾನದ ಪಕ್ಕದಲ್ಲಿ ಪ್ರೆಕ್ಷಣಿಯ ಹಳ್ಳವಿದೆ ಎತ್ತರವಾದ ಪ್ರದೇಶದಿಂದ ಬೃಹತಾಕಾರದ ಕಲ್ಲು ಬಂಡೆಗಳಲ್ಲಿ ನೀರು ಹರಿದು ಝರಿಗಳನ್ನು ಉಂಟು ಮಾಡಿದದ್ದು ಇಲ್ಲಿ ಬರುವ ಭಕ್ತಾದಿಗಳಿಗೆ,ಪ್ರವಾಸಿಗರನ್ನು ಕೈ ಬಿಸಿ ಕರೆಯುವ ಸ್ಥಳವಾಗಿದೆ,ಮಳೆಗಾಲದಲ್ಲಿ ಇಲ್ಲಿನ ನೀರು ರಭಸವಾಗಿ ನುಗ್ಗುವುದರಿಂದ ಹಾಲಿನ ನೊರೆಯಂತೆ ಕಾಣುತ್ತದೆ,ಅಲ್ಲದೆ ಜನರ ಕಣ್ಮಣ ಸೆಳೆಯುತ್ತದೆ,ಕಲ್ಲಿನ ಬಂಡೆಗಳಲ್ಲಿ ಬರುವ ನೀರಿನ ಶಬ್ದ ಹಾಗೂ ಅಲ್ಲಿನ ಸುಂದರವಾದ ಪರಿಸರ, ಪಕ್ಷಿಗಳ ಉನ್ಮಾದ ಕಿವಿ ಪಟಲಗಳಿಗೆ ಹಾಗೂ ಮನಸ್ಸಿಗೆ ಅಹ್ಲಾಧಕರ ಇಂಪ್ಪನ್ನು ನೀಡುತ್ತದೆ.
“ಸಿದ್ದನಕೊಳ್ಳ” ಸ್ಥಳದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯ ದಿನದಂದು ಭಕ್ತಾದಿಗಳು ಆಗಮಿಸಿ ಈ ಒಂದು ಕೊಳ್ಳದಲ್ಲಿ ಸ್ನಾನ ಮಾಡಿ ಹೋಗುತ್ತಾರೆ ಇನ್ನೂ ಯುವಕರಿಗೆ ಬೇಸಿಗೆ ಕಾಲದಲ್ಲಿ ಈಜುಕೊಳವೇ ಆಗಿರುತ್ತದೆ.
ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹಗಳು,ಜಾತ್ರೆಯು ಕೂಡ ಜರಗುತ್ತವೆ.
ಒಟ್ಟಿನಲ್ಲಿ ನಮ್ಮ ನಡುವೆ ಇರುವ ಹಿಂತಹ ಐತಿಹಾಸಿಕ ಕಲೆ ವಾಸ್ತುಶಿಲ್ಪ ಹೊಂದಿರುವ ಸ್ಥಳಗಳ ಸಂಶೋಧನೆಗಳಾಗಿ ಸ್ಥಳೀಯ ಇತಿಹಾಸದ ಪ್ರಜ್ಞೆ ಮುಂದಿನ ಯುವ ಜನಾಂಗಕ್ಕೆ ಮಾದರಿಯಾಗಬೇಕು ಅಲ್ಲದೆ ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಯವರು ಕಡೆಗಣಿನೆಗೆ ಒಳಪಟ್ಟ ಸ್ಥಳಗಳನ್ನು ಅಭಿವೃದ್ದಿ ಪಡಿಸಬೇಕು,ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕಲೆಯನ್ನು ಉಳಿಸುವ ಬೆಳೆಸುವ ಕಾರ್ಯ ಅವುಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ.
–ಆನಂದ ಈ ಹಂಪಣ್ಣವರ
ಸಾ||ಚಿಕ್ಕಬಾಗೇವಾಡಿ
ತಾ||ಬೈಲಹೊಂಗಲ
ಮೊ.ನಂ:-೮೪೩೧೧೬೬೪೫೭