ಗಝಲ್

ಗಝಲ್

ಮನವೆಂಬ ಆಲಯದಿ ಮಮತೆಯ ಜ್ಯೊೇತಿ
ಬೆಳಗೋಣ ಒಡತಿ
ಕಳೆದುಹೋದ ಮಧುರ ಕ್ಷಣಗಳ ನೆನೆಯುತ
ಸುಖಿಸೋಣ ಒಡತಿ

ಹರಿದಾಡುವ ಕನಸುಗಳ ನಸುನಗುತಾ ಬರಸೆಳೆದು
ನನಸಾಗಿಸೋಣ
ಹೃದಯದಿ ಅರಳಿರುವ ಭಾವಗಳನು ಸಿಂಗರಿಸಿ
ಆನಂದಿಸೋಣ ಒಡತಿ

ನಿನ್ನೊಲವಿನ ಪ್ರೇಮಪಾಶದಲಿ ಬಂಧಿಯಾಗಿ ಬೆಚ್ಚಗೆ
ಮಡಿಲಲ್ಲಿ ಮಲಗುವಾಸೆ
ಹುಣ್ಣಿಮೆಯ ಚಂದಿರನ ಬೆಳದಿಂಗಳ ನೀಲಿ ಬಾನಿನಲಿ
ತೇಲಾಡೋಣ ಒಡತಿ

ಅರಳಿದ ತಾವರೆಯ ಮೊಗದಿ ಬಿದ್ದ ಗುಳಿ ಕೆನ್ನೆಯ
ಸೊಬಗು ಅತಿ ಸುಂದರ
ಚಿಗುರಿದ ಒಲವಿನ ಹೃದಯದಿ ಪಾರಿಜಾತದ ಸುಗಂಧ
ಹರಡಿಸೋಣ ಒಡತಿ

ನನ್ನ ನಿನ್ನ ಪ್ರೀತಿಯ ಬದುಕು ಮಾದರಿಯಾಗಲಿ ಈಗಿನ
ಯುವ ಪೀಳಿಗೆಗೆ
“ಶರಣ” ಆಲಯದಲಿ ನಾವು ಉತ್ಸಾಹದ ಬುಗ್ಗೆಯಾಗಿ
ಬದುಕೋಣ ಒಡತಿ

.ಶರಣಬಸಪ್ಪ ಕುಂಬಾರ್. ಪೂನಾ

Don`t copy text!