ಲಯನ್ಸ್ ಕ್ಲಬ್ ಮಸ್ಕಿಯಿಂದ ಸಸಿ ನೆಡುವ ಕಾರ್ಯಕ್ರಮ

ಲಯನ್ಸ್ ಕ್ಲಬ್ ಮಸ್ಕಿಯಿಂದ ಸಸಿ ನೆಡುವ ಕಾರ್ಯಕ್ರಮ

e-ಸುದ್ದಿ ಮಸ್ಕಿ

ಮಸ್ಕಿ ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಕವಿತಾಳ ರಸ್ತೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಸಿದ್ದಲಿಂಗಯ್ಯ ಸೊಪ್ಪಿಮಠ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಿಂಗಸೂಗೂರು ಅರಣ್ಯ ಇಲಾಖೆಯವರು ಬಾದಾಮಿ, ಬೇವು , ರೋಜ್ ವುಡ್ , ಗುಲ್ ಮೊಹರ್ ಸಸಿಗಳನ್ನು ಸಂಸ್ಥೆಗೆ ಒದಗಿಸಿಕೊಟ್ಟಿದ್ದರು.

ಕವಿತಾಳ ರಸ್ತೆ ಯ ಎಡ ಬಲ‌ಬದಿಗಳಲ್ಲಿ ೧೦೦ ಸಸಿಗಳನ್ನು ನೆಡುವ ಮೂಲಕ ‘ಹಸಿರು ಮಸ್ಕಿ‌ ‘ಮಾಡುವ ಯತ್ನಕ್ಕೆ‌ ಲಯನ್ಸ್ ಸಂಸ್ಥೆ ಮುಂದಾಗಿದೆ.

ಇಲಾಖೆಯ ಸಿಬ್ಬಂದಿ ಅಶೋಕ್ ಹಾಜರಿದ್ದರು. ನೀರಿನ ಟ್ಯಾಂಕ್ ವ್ಯವಸ್ಥೆಯನ್ನು ಗುಡುದೂರು ಮಹಾಂತೇಶ್ ಗೌಡ ಮಾಡಿದ್ದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಸಂಸ್ಥೆಯ ಕಾರ್ಯದರ್ಶಿ ಬಸವಲಿಂಗಪ್ಪ ಲಿಂಗಶೆಟ್ಟಿ , ಕೊಶ್ಯಾದ್ಯಕ್ಷ ರವಿಕುಮಾರ್ ದೇಶಮುಖ್ ಮತ್ತು ಶಿವಪ್ರಸಾದ್ ಕ್ಯಾತ್ನಟ್ಟಿ ವಹಿಸಿದ್ದರು. ಸಂಸ್ಥೆಯ ಪ್ರಮುಖರಾದ ಲಕ್ಷ್ಮಿ ನಾರಾಯಣ ಶ್ರೇಷ್ಠಿ , ಆದಯ್ಯ ಸ್ವಾಮಿ ಕ್ಯಾತ್ನಟ್ಟಿ , ಶಶಿಕಾಂತ್ ಬ್ಯಾಳಿ, ಪಂಪಣ್ಣ ಗುಂಡಳ್ಳಿ, ಡಾ।। ಬಿ. ಎಚ್. ದಿವಟರ್, ಡಾ।। ಮಲ್ಲಿಕಾರ್ಜುನ ಇತ್ಲಿ , ಡಾ।। ಮಲ್ಲಿಕಾರ್ಜುನ ಶೆಟ್ಟಿ , ಶಿವರಾಜ್ ಇತ್ಲಿ ಉಪಸ್ಥಿತರಿದ್ದರು.

Don`t copy text!