ಬದುಕು ಒಂದು ಒಗಟು

ಬದುಕು ಒಂದು ಒಗಟು

ಒಗಟಿನ ಸಾರಾಂಶವೇ ನಿನ್ನ ಬದುಕು,
ಸರಿಯುತ್ತರ ನೀಡುವುದು ಈ ಸಮಾಜ
ಆ ಉತ್ತರಕ್ಕೆ ಮೀರಿದ ಉತ್ತರ ನಿನ್ನಲ್ಲಿದೆ, ನೀ ಬದುಕು
ಸ್ನೇಹವ ನಂಬಿ ನೀ ಬದುಕು,
ಸ್ನೇಹವೇ ಅಲ್ಲ ನಿನ್ನ ಬದುಕು.
ಸಂಬಂಧಗಳಿಗಾಗಿ ನಿ ಬದುಕು,
ಸಂಬಂಧವು ಬಾಳೆ ಹಣ್ಣಿನ ಸಿಪ್ಪೆ ಇದ್ದಂತೆ ಎಂದು ತಿಳಿದು ನೀ ಬದುಕು.
ನೀನೇ ನಿನ್ನ ಬದುಕು,
ನಿನಗಾಗಿ ನೀ ಬದುಕು.
ಬದುಕಿನ ಅರ್ಥ ತಿಳಿದು ನೀ ಬದುಕು,
ಅರ್ಥ ತಿಳಿಯುವಸ್ಟರಲ್ಲಿ ಕಳೆದುಹೋಯ್ತು ನಿನ್ನ ಬದುಕು.
ಈಗ ಬೇರೆಯವರ ಸ್ವತ್ತು ನಿನ್ನ ಬದುಕು,
ಅವರಿಗಾಗಿ ನೀ ಬದುಕು.
ಮುಪ್ಪಾಗುವರೆಗಷ್ಟೇ ನಿನ್ನ ಬದುಕು,
ನೀ ಸತ್ತರೆ ಮಣ್ಣಲ್ಲೇ ಹೋಯ್ತು ನಿನ್ನ ಬದುಕು.
ಜಗವು ಹೆಸರಿಸುವಂತೆ ನೀ ಬದುಕು,
ಆಗ ಅರ್ಥಪೂರ್ಣವಾಯ್ತು ನಿನ್ನ ಬದುಕು.
ಇದೆಲ್ಲವೂ ಮನುಜರ ಬದುಕು,
ಇದನ್ನು ತಿಳಿದು ನೀ ಬದುಕು.


_ಮೌನೇಶ್.ಬಾರ್ಕೆರ್.
10 ನೇ ತರಗತಿ,ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆ ಮಸ್ಕಿ

Don`t copy text!