ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಭೀಮಪ್ಪ ಆಯ್ಕೆ
e- ಸುದ್ದಿ ಮಸ್ಕಿ
ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಭೀಮಪ್ಪ ಪ್ರಸಕ್ತ ವರ್ಷ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಯಾಗಿದ್ದಾರೆ.
ಸೆ.೧೧ ರಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಜಿಲ್ಲಾಆಡಳಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೀಮಪ್ಪ ಶಿಕ್ಷಕರು ವಿಜ್ಞಾನ ಶಿಕ್ಷಕರಾಗಿದ್ದು ರಾಜ್ಯ ಮಟ್ಟದ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿದ್ದು, ರಾಜ್ಯದ ಬೇರೆ ಬೇರೆ ಭಾಗದ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.
ವಿಜ್ಞಾನ ಬ್ಲಾಗ್, ವಿಜ್ಞಾನ ಆ್ಯಪ್ ತಯಾರಿಸುವ ಮೂಲಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡವರಲ್ಲಿ ಭೀಮಪ್ಪ ಶಿಕ್ಷಕರು ಮೊದಲಿಗರು ಎಂದು ಶಿಕ್ಷಣ ಇಲಾಖೆ ಪ್ರಶಂಸಿದೆ. 8,9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಮೂಲಕ ಪರಿಣಾಮಕಾರಿ ಬೋಧನೆ ಮಾಡುತ್ತಿದ್ದಾರೆ.