ಸುಂಕ್ಲೇಶ ಹೂ

ಸುಂಕ್ಲೇಶ ಹೂ

ನಿಮಗಾಗಿ ಕಾದಿರುವೆ
ಸುಂಕ್ಲೇಶ ಮರದ ಹಾಗೆ
ಮೊಗ್ಗರಳಿ ಹೂವಾಗೆ
ಕೆಂಪು ರಂಜಾಗಿ

ನೊಂದ ಮನದಿ
ಯಶೋಗಾಥೆ
ಒಡಲುರಿಯಲ್ಲಿ
ಬೆಂದು ಬಸವಳಿದರೂ!

ಬಿಸಿಲ ಬೇಗೆಯಲಿ
ನಳನಳಿಸುತ್ತಿರುವೆ
ಹಿಸ್ಟೀರಿಯಾ ಆಗಿ
ನರಳಬೇಕಿತ್ತು.

ನಿಮಗೆಲ್ಲಾ ಅರ್ಥವಾಗುವುದಿಲ್ಲ
ಹೆಣ್ಣ ಅರಣ್ಯರೋಧನ
ಪರಿತಪಿಸಿ ಆತ್ಮರತಿ
ವಚನ ಕಾಲ ಹಿಡಿದು.

ಪಾತವಾದರೂ
ಮತ್ತೆ ಹೆರುತ್ತೇನೆ
ಒಡಲುರಿಯಲಿ
ಕಾವ್ಯ ಲಹರಿಯ

ನನ್ನ ಕಣ್ಣೀರ ಕಂಬನಿ
ಕೋಡಿಯಾಗಿ ನೊಂದ
ಹೆಣ್ಣಜೀವಿಗೆ ಪುಷ್ಠಿ ನೀಡಿ
ಗಿಡ ಮರವಾಗಿ

ಗುಲ್ಮೋಹರ ಹೂ
ನಾನು ಹಳ್ಳಿಯ ಹುಡುಗಿ
ನಮ್ಮ ಧಾಟೀಲಿ ಸುಂಕ್ಲೇಶ ಹೂ
ಧಗೆಯಲ್ಲೇ ನಗುತ್ತೇನೆ ನಾನು.


ಡಾ.ಸುಜಾತ.ಅಕ್ಕಿ

One thought on “ಸುಂಕ್ಲೇಶ ಹೂ

  1. ಹೇಳಲಾರದ ಹೆಣ್ಣೊಡಲ ಭಾವನೆಗಳು ಗುಲ್‌ಮೊಹರ ಹೂವಾಗಿ ಅರಳಿದಂತಿದೆ ಈ ಕವಿತೆ…

Comments are closed.

Don`t copy text!