ಕಟ್ಟೋಣ ಬಸವ ಧರ್ಮ

ಕಟ್ಟೋಣ ಬಸವ ಧರ್ಮ

ಬಸವಣ್ಣ ಒಬ್ಬ ವ್ಯಕ್ತಿ ಅಲ್ಲ. ಅವರೊಬ್ಬ ಜಗತ್ತಿಗೆ ಅವತರಿಸಿದ ಮಹಾಪುರುಷ. ಅವರು ಒಬ್ಬ ಅದ್ಭುತ ಚೇತನ. ಬಡವರು ಬಲ್ಲಿದರ ಮದ್ಯೆ, ಮೇಲು ಕೀಳುಗಳ ಮದ್ಯೆ ಏರ್ಪಟ್ಟಿದ್ದ ಕಂದಕ ಕಿತ್ತಿ ಹಾಕಿ ಸಮ‌ಸಮಾಜ ಕಟ್ಟಿದ ದಾರ್ಶನಿಕ. ಅವರು ಕೊಟ್ಟಿರುವ ಲಿಂಗಾಯತ ಧರ್ಮ ಅದರ ವಿವರ ಇಲ್ಲಿದೆ. ಇಷ್ಟವಾದವರೆಲ್ಲರೂ ಅನುಸರಿಸಲು ಯಾವ ನಿರ್ಭಂದವು‌ ಇಲ್ಲ.

1. ಅದು ವೈಚಾರಿಕತೆ ಆಧರಿಸಿದ ಧರ್ಮ.

2.ಜೀವನ ಪರ್ಯಂತ ನೈತಿಕ ಮೌಲ್ಯಗಳನ್ನು ಹೊತ್ತ ಧರ್ಮ

3.ಮೂಢ ನಂಬಿಕೆ ಇಲ್ಲದ ಧರ್ಮ.

4.ಸ್ತ್ರೀಯರು ಪುರುಷರು ಸಮನಾದ ರೀತಿ, ಸಂಸ್ಕಾರ,ಕೊಟ್ಟ ಧರ್ಮ .

5.ಜಾತಿ ವ್ಯವಸ್ಥೆಯ ವಿರುದ್ಧ ತಿರುಗಿ ನಿಂತ ಧರ್ಮ.

6.ಕಾಯಕ ವರ್ಗದ ಜನರಿಗೆ ಸಮಾನತೆ ಮತ್ತು ಅವರ ಬಗ್ಗೆ ಕಾಳಜಿ ಇರುವ ಧರ್ಮ.

7.ದೇವಾಲಯದಲ್ಲಿ ಬಂದಿಸಲ್ಪಟ್ಟ,ಮೂರ್ತಿ ಪೂಜೆ ,ಭಕ್ತ ದೇವರ ಮಧ್ಯ ಪೂಜಾರಿ ಇದೆಲ್ಲ ದಿಕ್ಕರಿಸಿದ ಧರ್ಮ.

8.ಬೆಟ್ಟದ ಮೇಲಿರುವ ಲಿಂಗ .ಬಿಟ್ಟು ಕರ ಕಮಲ ಪೂಜಿತ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೊಸ ಬೆಳಕು ನೀಡುವ ಧರ್ಮ.

9.ನಾಲ್ಕು ವರ್ಗದ ವಿಂಗಡಣೆ. ಹಾಗೂ ನಾಲ್ಕು ವೇದಗಳ ದಿಕ್ಕರಿಸಿದ ಧರ್ಮ.

10.ಅರಿವು ಮೂಡಿಸುವ, ಸ್ವಂತಿಕೇ ಬೆಳೆಸುವ ನಿಟ್ಟಿನಲ್ಲಿ ವೈಚಾರಿಕತೆಯ ಪ್ರಜ್ಞೆಯನ್ನು ಬೆಳೆಸುವ ಧರ್ಮ.

11.ನಕ್ಷತ್ರ, ರಾಶಿ, ಗೋತ್ರ ವಿರೋಧಿ ಧರ್ಮ.ಹೋಮ ಹವನ ನಂಬದ ಧರ್ಮ.

12.ಬದಕು ಸರಳತೆ ತುಂಬಿದ ಧರ್ಮ.
ದೃಢವಾದ ನಂಬಿಕೆ ಏಕದೇವೋಪಾಸನೆ ಹೊಂದಿದ್ದು ಅದ್ಭುತ
ಧರ್ಮ.

14.ಅಹಿಂಸಾ ಧರ್ಮ. ತನ್ನ ತರ ಮೊತ್ತಬರ ಕಾಣುವ ಧರ್ಮ.

15.ದೇವರ ಆರಾಧನೆಗಳನ್ನು ವಿಕೃತ ಮಾಡದೇ ಇರುವುದು. ಸೃಷ್ಟಿಯ ಆಕಾರ ಹೇಗಿದೆಯೋ ಹಾಗೆ ಪೂಜಿಸುವದು .

16.ಹೆಣ್ಣು ಮತ್ತು ಗಂಡು, ಪಶು ಪಕ್ಷಿಗಳ ಆಕಾರದಲ್ಲೂ ಪೂಜಿಸುವದು ಎಲ್ಲವೂ ಇಲ್ಲಿ ನಿಷಿದ್ದ.

17.ತನ್ನ ಮತ್ತು ಸಮಷ್ಟಿ ಪ್ರಜ್ಞೆಯನ್ನು ಹೊಂದಿದ ಧರ್ಮ.ಮತ್ತೊಬ್ಬರ ಹಿತವನ್ನು ಕೂಡ ಬಯಸುವ ಧರ್ಮ.

18.ಜ್ಯೋತಿಷ್ಯ ಶಾಸ್ತ್ರ ಅಲ್ಲಗೆಳೆದ ಏಕೈಕ ಧರ್ಮ.

19.ಜನ ಸಾಮಾನ್ಯರ, ಜನ ಪರ ಹಾಗೂ ಜನರ ಅಂದ್ರೆ ತುಳಿತಕ್ಕೆ ಒಳಪಟ್ಟ ಸರವರ ಮಹಾತ್ಮ ಮಾಡಿದ ಧರ್ಮ.

20.ಸನಾತನ ಧರ್ಮದ ಹೆಸರಿನಲ್ಲಿ ನಡೆದ ಅನೇಕ ರೀತಿಯ ಅರ್ಥ ರಹಿತ ಆಚರಣೆ ದಿಕ್ಕರಿಸಿದ ಧರ್ಮ.

ಹೀಗೆ ಹಲವಾರು ರೀತಿಯ ವಿಶೇಷತೆ ಹೊಂದಿದೆ ಈ ಧರ್ಮ.

ಅಂತೆಯೇ ಒಂದು ಕಡೆ

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ.
ಎಂದು ಹೇಳಿರುವರು
ಚೆನ್ನ ಬಸವಣ್ಣನವರು.

ಶೈವ ಪರಂಪರೆ ಧಿಕ್ಕರಿಸಿ, ಹೊಸದೊಂದು ರೂಪ ಕೊಟ್ಟು, ಹೊಸ ಬೆಳಕು ಚೆಲ್ಲುವ ಈ ರೀತಿಯ ವಿವರ ಇಲ್ಲಿದೆ. ಎಂದು ಚಿನ್ಮಯ ಜ್ಞಾನಿ ಚೆನ್ನ ಬಸವಣ್ಣನವರ ವಚನವೇ ಸಾಕು.

ಒಟ್ಟಾರೆ ಹೇಳುವುದಾದರೆ, ಇದು ಪುರೋಹಿತಶಾಹಿ ,ಜಾತಿ ವ್ಯವಸ್ಥೆಯ ವಿರುದ್ಧ, ಲಿಂಗ ತಾರತಮ್ಯ ವಿರುದ್ದವೂ, ತಿರುಗಿ ನಿಂತಿದೆ. ಅಷ್ಟೇ ಅಲ್ಲದೇ ಸಕಲ ಜೀವರಾಶಿಗಳ ಲೇಸೆ ಬಯಸುವ ಧರ್ಮ. ಎಲ್ಲಕಿಂತ ಮೊದಲು ಈ ಧರ್ಮ ವಿಚಾರ ಮಾಡಿ ಅದನ್ನು ನೋಡಿ, ನಂತರ ಒಪ್ಪಿಕೊಂಡು ಆರಾಧಿಸಿ.ಅನುಸರಿಸಿ. ಎಂದು ಅರಿವೇ ಗುರು ಎಂಬ ವಿಷಯಕ್ಕೆ ಮಹತ್ವ ಪಡೆದಿದೆ.

ಇದ್ದವರು,ಇಲ್ಲದವರು ,ಕುಲಜರು ಇವೆಲ್ಲವೂ ಅಲ್ಲಿ ಇಲ್ಲ.ಲಿಂಗವೆಲ್ಲ ಧರಿಸಿದವರು ನನ್ನವರೇ ,ನನ್ನ ಧರ್ಮ ಬಾಂಧವರೆ ಎಂದೂ ಒತ್ತಿ ಹೇಳುತ್ತದೆ.

ಇವನಾರವ ಎನ್ನದೆ ಸರ್ವರ ಆರಾಧಿಸುವ ಮತ್ತು. ಧರ್ಮ ಸಂಸ್ಕಾರ ಕೊಟ್ಟ ನಂತರ ನಮ್ಮ ಧರ್ಮ ಬಂಧು ಎಂದು ಸಾರುತ್ತದೆ.

 

ಕವಿತಾ ಮಳಗಿ ಕಲಬುರ್ಗಿ

Don`t copy text!