e-ಸುದ್ದಿ ಓದುಗರಿಗಾಗಿ ಇಬ್ಬರು ಕವಯತ್ರಿಯರಾದ ಡಾ.ಸುಜಾತ ಅಕ್ಕಿ ಮತ್ತು ಸವಿತಾ ಮಾಟೂರು ಇಲಕಲ್ಲ ಅವರು ಒಂದೇ ಚಿತ್ರಕ್ಕೆ ವಿಭಿನ್ನವಾಗಿ ಕವಿತೆ ರಚಿಸಿದ್ದಾರೆ. ಓದುಗರು ಓದಿ ಅಭಿಪ್ರಾಯ ತಿಳಿಸಿ
-ಸಂಪಾದಕ
ಮೌನ ಭಾಷೆ
ಭಾರವಾದ ಹೃದಯಕ್ಕೆ
ನಿನ್ನೀ ಲಗ್ಗೆ
ಕಾಯುವ ಕಾಯಕ
ಎಲ್ಲಿರುವೆ ನೀ ಭಾವದ
ಭಾರದಲಿ ತೆಂಕಣದ ಸುಳಿಗಾಳಿ
ಕನಸಿನಲ್ಲೂ ಕನವರಿಕೆ
ನಿನ್ನೊಡನೆ ಬಂಧನರಕ್ಷ
ಅದೇಕೋ ಕಾಣೆ
ಹಗಲೆಲ್ಲಾ ಇರುಳಾಗಿ
ಕವಿತೆಯೂ ಮೌನಕೆ ಜಾರಿ
ಏಕಿಷ್ಟು ಚಟಪಟಿಕೆ
ಹಗುರಾಗಲು ಮನ
ಗೂಡುಕಟ್ಟುವ ತನು
ಕಾರ್ಮೋಡ ಕಳೆದು
ಮಳೆ ಹನಿ ಉಯ್ಯಾಲೆ
ಸೂಜಿಗಲ್ಲಂತೆ
ಮಂಜಿನ ಸೋನೆ
ಮಲ್ಲಿಗೆಯ ಘಮ
ನಳನಳಿಸುತಿಹೆ
ಭಾವಬಂಧನವೇ
ಕೇಳುತಿಲ್ಲವೇ
ಮೌನಭಾಷೆ ಬರೆದು
ಕಣ್ಮನದಲಿ ತೇಲುತಿವೆ
ಮೋಡದ ಮರೆಯಲಿ
ಮಗ್ಗಿಸಾಲಂತೆ ನೆನಹು
ನನ್ನರಸ ರಸಭಾವ
ತಂದಿರಿಸು ಹೊಸಭಾವ
ವತ್ತರಿಸುವಾ ಜೀವಭಾವ
ಜತೆಗೂಡುವ ಅನುಭಾವ
ಅಂಗನೆಯ ಸಖ್ಯಾನುಭಾವ
–ಡಾ.ಸುಜಾತ.ಅಕ್ಕಿ