ವಾಲ್ಮೀಕಿ ಜಯಂತಿ, ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ-ಕಟ್ಟಿಮನಿ

ಮಸ್ಕಿ : ಕರೊನಾ ವೈರಸ್ ತಡೆಗಟ್ಟುವುದಕ್ಕಾಗಿ ಜನಸಂದಣಿ ಹೆಚ್ಚಾಗಿ ಸೇರದೆ ರಾಜ್ಯೋತ್ಸವ,
ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಿ ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮನವಿ ಮಾಡಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಿ ಮಾತಣಾಡಿದರುವಾಲ್ಮೀಕಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಕರೊನಾ ವೈರಸ್ ಅಡ್ಡಿಯಾಗಿದ್ದು, ಹೆಚ್ಚು ಜನ ಸೇರಿದರೆ ಕರೊನಾ ಹರಡುವ ಭಯ ಇರುವುದರಿಂದ ಯಾವುದೇ ಸಭೆ ಸಮಾರಂಭ ಹಾಗೂ ಹಬ್ಬ-ಹರಿದಿನಗಳಲ್ಲಿ ಹೆಚ್ಚಾಗಿ ಜನರು ಸೇರದಂತೆ ತಡೆಗಟ್ಟುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು.

ವಾಲ್ಮೀಕಿ ಸಮಾಜದ ಮುಖಂಡ ಬಸನಗೌಡ ಪೋಲಿಸ್ ಪಾಟೀಲ್ ಮಾತನಾಡಿ ಸರ್ಕಾರದ ನಿಯಮದಂತೆ ಕಡಿಮೆ ಜನರಿದ್ದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಮಾಜದ ವತಿಯಿಂದ ಸಾಂಕೇತೀಕವಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ರಕ್ಷಣಾ ವೇಧಿಕೆಯ ಅಧ್ಯಕ್ಷ ಅಶೋಕ ಮುರಾರಿ ಮಾತನಾಡಿ ಕನ್ನಡಪರ ಸಂಘಟನೆಗಳು ಅತ್ಯಂತ ಸರಳ ರೀತಿಯಲ್ಲಿ ರಾಜ್ಯೋತ್ಸವ ಆವರಣೆ ಮಾಡುತ್ತೇವೆ ಎಂದರು.
ಪುರಸಭೆ ಸದಸ್ಯ ರವಿಗೌಡ ಪಾಟೀಲ್, ಎಪಿಎಂಸಿ ನಿರ್ದೇಶಕ ಬಸ್ಸಪ್ಪ ಬ್ಯಾಳಿ, ಅಬ್ದುಲ್ ಗನಿಸಾಬ್, ಪ್ರಭಾರಿ ಬಿಇಓ ಬಸ್ಸಪ್ಪ ತನಿಖೆದಾರ, ಪ್ರಾಂಶುಪಾಲ ಪಂಪಣ್ಣ ಗುರಿಕಾರ, ಪುರಸಭೆ ಸತ್ಯನಾರಾಯಣ, ಬಸವರಾಜ ಉದ್ಬಾಳ್, ಆರ್.ಕೆ.ನಾಯಕ. ಸಿದ್ದು ಮುರಾರಿ, ಘನಮಠದಯ್ಯ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಭಾಗವಹಿಸಿದ್ದರು.

 

Don`t copy text!