ಬುಗುಡಿ ಯಂತಹ ವಸ್ತು ಅಲ್ಲ, ನೆಗೆಡಿ ಯಂತಹ ಜಡ್ಡ ಅಲ್ಲ

 ವಿಶೇಷ ಲೇಖನ  : ನಟರಾಜ್ ಸೋನಾರ

ಬುಗುಡಿ ಕಡ್ಡಿ ಮಾಡುವ ನುರಿತ ಅಕ್ಕಸಾಲಿಗರು ಒಂದು ಜೊತೆ ಬುಗುಡಿ ಮಾಡಬೇಕಾದರೆ, ಒಂದು ಸಾವಿರ ಬಂಗಾರದ ತುಂಡುಗಳನ್ನು ಕ್ರಮಬದ್ದವಾಗಿ ಜೋಡಿಸಿದಾಗ ಅದು ಒಂದು ಬುಗುಡಿ ವಸ್ತು ಆಗುವುದು
ಬುಗುಡಿಲ್ಲಿ ಐದು ಕಳಸದ ಬುಗುಡಿ, ಏಳು ಕಳಸದ ಬುಗುಡಿ, ಚಳ ತುಂಬು ಬುಗುಡಿ, ಗಡ್ಡಿ ಬುಗುಡಿ,ಸಾದಾ ಬುಗುಡಿ, ಮೇಲೆ ಕಳಸ ಕೆಳಗ ಮುತ್ತು ಬಿಗಿದು ಮಾಡಿದ ಬುಗುಡಿ ಅದರ ವಿನ್ಯಾಸ ಮನಮೋಹಕ ಅನೇಕ ಬುಗುಡಿ ಪ್ರೀಯ ಹೆಣ್ಣು ಮಕ್ಜಳ ಅತಿಪ್ರೀಯ ವಸ್ತು ಬುಗುಡಿ.
ನಾಲ್ಕ ಅಣೆತೂಕದ ಬುಗುಡಿ ; ಒಂದುವರೆ ಅಣೆ ತೂಕದ ತಂತಿ : ಒಂದುನೂರು ಮುತ್ತು, ಬೇಕಾಗುತ್ತವೆ ಅಕ್ಕಸಾಲಿಗರ ಮಜೂರಿ ಬುಗುಡಿ ಮಾಡಲು ಎರಡುನೂರು ರೂಪಾಯಿ, ಮುತ್ತು ಬಿಗಿಯಲು ಐದನೂರು ರೂಪಾಯಿ ಕೂಲಿ ತಗೆದುಕೊಂಡು ಸುಂದರ ವಾದ ಬುಗುಡಿ ತಯಾರಿಸುವ ಜಾಣ್ಮೆ ಇವರದು.

ಅಕ್ಕಸಾಲಿಗರಲ್ಲಿ ಕೆಲವರು ಬುಗುಡಿ ಎಕ್ಸಪರ್ಟ ಗಳು ಇನ್ನೂ ಇದ್ದಾರೆ.ಬುಗುಡಿಗೆ ಸಾವಿಲ್ಲ.

ನೆಗಡಿ ಯಂತಹ ಜಡ್ಡ ಅಲ್ಲ

ನೆಗಡಿ ಅನ್ನುವುದು ಜಡ್ಡ ಅಲ್ಲ ಖರೆ ಆದರ ನೆಗೆಡಿ ಬಂತು ಅಂದರ ಮನುಷ್ಯನನ್ನ ಹೈರಾಣಮಾಡಿ ಬಿಡುವುದು ,ಅದು ಬಂದರ ಜಲ್ದೀ ಹೋಗಗಂಗಿಲ್ಲ ದೇಹದಲ್ಲಿನ ನೀರಿನ ಅಂಶ ಕಡಿಮೆ ಮಾಡಿ ನರಗಳಿಗೆ ಹೆಚ್ಚಿನ ಒತ್ತಡ ಇಡೀ ದೇಹ ಒಂತರ ಸುಸ್ತೋ ಸುಸ್ತು ಇದು ಜಡ್ಡ ಅಲ್ಲ ಆದರೆ ,ಜಡ್ಡ ಆದಾಂಗ ಆಗಿ ನೆಗಡಿ ಕಡಿಮೆಯಾಗುವುದರೊಳಗ ಅವನ ಮಾರಿ ನೋಡಲಾರದಂಗ ಆಗತೈತಿ ಅದಕ್ಕ
ನಮ್ಮ ಹಿರಿಯ್ಯಾರು
ಬುಗುಡಿ ಅಂತ ವಸ್ತು ( ಆಭರಣ )ಅಲ್ಲ : ನೆಗಡಿ ಅಂತ ಜಡ್ಡ ಅಲ್ಲ ! ಅಂತ ಅಂದರೇನೋ ?
ಒಟ್ಟಾರೆ, ನೆಗಡಿ ಬುಗುಡಿ ಪ್ರಾಸ ಹೇಂಗೀದೆ?

ವಸ್ತ = ಆಭರಣಜ

ಜಡ್ಡ : ಅನಾಾರೋಗ್ಯ

ಉತ್ತಮ ಶಿಕ್ಷಣಕ್ಕಾಗಿ ಶ್ರೀಉಮಾಮಹೇಶ್ವರಿ ಕಾಲೇಜಿಗೆ ಸೇರಿರಿ

 

Don`t copy text!