ರವಿರಾಜ್ ಸಾಗರ್ ಅವರಿಗೆ ಡಾ.ಕವಿತಾ ಕೃಷ್ಣ ಪ್ರಶಸ್ತಿ ಪ್ರದಾನ
e-ಸುದ್ದಿ ಮಸ್ಕಿ
ರವಿರಾಜ್ ಸಾಗರ್ ಎಂದು ಗುರುತಿಸಿಕೊಂಡಿರುವ ಸಾಗರದ ಮಂಡಗಳಲೆಯ ರವಿಚಂದ್ರ ಅವರ ಜಾನಪದ ಪಠ್ಯಂತರ್ಗತ ಪ್ರಯೋಗ ಕೃತಿ, ” ನಮ್ಮೂರ ಜಾನಪದ ಅನುಸಂಧಾನ” ಕೃತಿಗೆ ರಾಜ್ಯ ಮಟ್ಟದಲ್ಲಿ ನಾಡಿಗ್ ಸಾಹಿತ್ಯ ಪ್ರತಿಷ್ಠಾನ 2019 ನೇ ಸಾಲಿನಲ್ಲಿ ಕೊಡಮಾಡುವ ಡಾ.ಕವಿತಾ ಕೃಷ್ಣ ಪುರಸ್ಕಾರವನ್ನು ರವಿರಾಜ ಅವರಿಗೆ ತುಮಕುರಿನಲ್ಲಿ ಪ್ರದಾನ ಮಾಡಲಾಯಿತು .
ಈ ಕೃತಿಯು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಲ್ಕಾಪುರ ಶಾಲಾ ಮಕ್ಕಳು ,ಪಾಲಕರು, ಕಲಾವಿದರ ನೇತೃತ್ವದಲ್ಲಿ ಜಾನಪದ ಸಂಪಾದನೆ, ಆ ಜಾನಪದಗಳನ್ನು ಶಾಲಾ ಕನ್ನಡ ,ಗಣಿತ ,ಪರಿಸರ ಪಾಠಗಳ ಪಠ್ಯಾಂಶ ಗಳನ್ನು ಪಠ್ಯಂತರ್ಗತಗೊಳಿಸಿ ರಚಿಸಿದ ಜಾನಪದಗಳ ವಿಶಿಷ್ಟ ಸಂಕಲನವಾಗಿತ್ತು.
ಜಾನಪದ ಪುನರುಜ್ಜೀವನಕ್ಕಾಗಿ ಇದು ವಿಶಿಷ್ಟ ಪ್ರಯೋಗವೆಂದು ಜಾನಪದ ತಜ್ಞರ ವಲಯದ ಅಭಿಪ್ರಾಯವಾಗಿದ್ದು ಸಾಕಷ್ಟು ಪ್ರಶಂಸೆಗೆ ಒಳಗಾದ ಕೃತಿಯಾಗಿದ್ದು ಈಗ ಮಹತ್ವದ ಪ್ರಶಸ್ತಿಯ ಗರಿಯೂ ಲಭಿಸಿದೆ.
ಇದು ರಾಯಚೂರು ನೆಲದ ಜಾನಪದ ಸೊಗಡಿಗೆ ದೊರೆತ ಪುರಸ್ಕಾರ ಎಂದು ರವಿರಾಜ್ ಸಾಗರ್ ಸಂತಸ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಫೌಂಡೇಶನ್ ಪಾರ್ ದಿ ಆರ್ಟ್ ಸಂಸ್ಥೆಯ ಕಲಿ ಕಲಿಸು ಯೋಜನೆಗೆ ಸಹ ಆಯ್ಕೆಯಾಗಿತ್ತು.
ಜೊತೆಗೆ ಮೈಸೂರು ಮಿತ್ರ ಪತ್ರಿಕೆಯ ರಾಜಕುಮಾರ್ ಅವರಿಗೆ ಡಾ.ನಾಡಿಗ್ ಕೃಷ್ಣ ಮೂರ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ ಕವಿತಾಕೃಷ್ಣ ವಹಿಸಿದ್ದರು. ಪ್ರಕಾಶ್ ಕೆ ನಾಡಿಗ್. ಸಿದ್ದಲಿಂಗಪ್ಪ ಹಿರಿಯ ಸಾಹಿತಿ ಚನ್ನಬಸಪ್ಪ ಪದ್ಮಾಕೃಷ್ಣಮೂರ್ತಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಾಜರಿದ್ದರು.