ಸದಾಶಿವ ಆಯೋಗ ವರದಿ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ
e-ಸುದ್ದಿ ಮಸ್ಕಿ
ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಭ್ರಮರಂಭ ದೇವಸ್ಥಾನ ದಿಂದ ಕನಕ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ ರಸ್ತೆಗಳ ಮುಖಾಂತರ ತಹಶಿಲ್ದಾರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ ಕವಿತಾ ಆರ್ ಅವರಿಗೆ ಮನವಿ ಸಲ್ಲಿಸಿದರು..
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ರವಿಕುಮಾರ್ ಚಿಗರಿ ಮಾತನಾಡಿ ಭಾರತ ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಸಂರಕ್ಷಣಾದಡಿ ಭೋವಿ, ಬಂಜಾರಾ, ಲಂಬಾಣಿ, ಕೊರವ, ಕೊರಚ ಇತ್ಯಾದಿ ಅಲೆಮಾರಿ ಜನಾಂಗದ ಏಳಿಗೆಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕಾಗಿದೆ ಎಂದರು.
ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿಯವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ದುರುಗಪ್ಪ ಚಿಗರಿ, ನೀಲಕಂಠಪ್ಪ ಭಜಂತ್ರಿ, ಮುಖಂಡರಾದ ಮಲ್ಲಯ್ಯ ಗುಡಿಸಲಿ, ವೀರೇಶ್ ಆನೆಹೊಸೂರು, ಆನಂದ ಬನಗಲ್, ಮಲ್ಲಯ್ಯ ನಾಗರಾಳ , ಯಲ್ಲಪ್ಪ ತುರ್ವಿಹಾಳ, ಮಲ್ಲಯ್ಯ ಭಜಂತ್ರಿ ವಸಂತ್ ಭಜಂತ್ರಿ ದೇವಣ್ಣ ಜಾಧವ್, ಲೋಕೇಶ್ ಜಾಧವ್, ಅಂಬಣ್ಣ ಭೋವಿ, ಶಿವಪ್ಪ ಬಸಾಪೂರ, ಸೀತಾರಾಮ್ ,ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.