ಬಣ್ಣದ ಬದುಕು
ಒಲವಿನ ಬಣ್ಣ ಸಂಬಂಧಗಳಿಗೆ
ಅರಿವಿನದು ಅಕ್ಷರಗಳಿಗೆ
ಛಲ ತುಂಬಿದ ಬಣ್ಣದ ಹೆಜ್ಜೆ ಸಾಧನೆಗೆ
ನಗುವಿನದು ಇರಲಿ ರೋದನೆಗೆ
ಮನಸಾಗುವುದು ತಿಳಿ, ಶಾಂತ ಬಣ್ಣ
ಬದಲಾದರೆ ಭಾವದ ಬಣ್ಣ
ಸದ್ಭಾವನೆ ಹಾದಿಗೆ ನಮ್ಮ ಪಯಣ
ಆಗುವುದು ಸುಂದರ, ಜೀವನ ಬಣ್ಣ
ಅವಕಶವಾದಿಯಾದರೆ ಮನ
ಊಸರವಳ್ಳಿ ಪಟ್ಟ,
ಕಣ್ಣೋಟಗಳ ಇರಿತ, ಕೆಂಬಣ್ಣ
ಮಾತು ರಂಗು ರಂಗಾಗಿದ್ದು
ಮತಿಯು ಮಾತ್ರ ಕಪ್ಪಾದರೆ
ಲೋಕವೇ ಮೋಡಿಯಾದರು
ಒಪ್ಪದು ಹೃದಯ, ಅದರ ಬಣ್ಣ ಸತ್ಯ
ಬೇಕು ಸ್ವಯಂ ಅವಲೋಕನ
ಅನಂತ ಗುಣಾವಗುಣಗಳ ಬಣ್ಣ
ಮೊಗದ ರಂಗಲಿ ಗೌಣ, ಆದರೆ;
ಆಂತರ್ಯದಿ ಇದ್ದರೆ ಶ್ವೇತ ವರ್ಣ
ಹಸಿರಾಗಿಯೇ ಉಳಿಯುವುದು
ಹೆಸರಿನ ಬಣ್ಣ,
ಉಸಿರಿನ ಬಣ್ಣ ಕಮರಿದರೂ…
–ವರದೇಂದ್ರ ಕೆ ಮಸ್ಕಿ