ಪುರಾತನ ಐತಿಹಾಸಿಕ ಸ್ಮಾರಕಗಳ ಡಿಜಟಲೀಕರಣ ಕಾರ್ಯ ಆರಂಭ

ಐತಿಹಾಸಿಕ ಸ್ಮಾರಕಗಳ ಡಿಜಟಲೀಕರಣ ಕಾರ್ಯ ಆರಂಭ

e- ಸುದ್ದಿ ಲಿಂಗಸುಗೂರು

ತಾಲೂಕಿನ ಹಲವಾರು ಐತಿಹಾಸಿಕ ತಾಣಗಳ ಸ್ಮಾರಕಗಳು ಕಾಲಾಂತರದಲ್ಲಿ ಹಾಳಾಗುತ್ತಿದ್ದು ಅವುಗಳನ್ನು ಡಿಜಟಲೀಕರಣ ಮಾಡುವುದರ ಮೂಲಕ ಸ್ಮಾರಕದ ಯಥಾಸ್ಥಿತಿಯನ್ನು ಚಿತ್ರಿಕರಿಸಿ ಉಳಿಸುವ ತ್ರಿಡಿ ತಂತ್ರಜ್ಞಾನ ಆಧಾರಿತ ಡಿಜಿಟಲೀಕರಣಕ್ಕೆ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದಲೂ ಕರ್ನಾಟಕ ಡಿಜಿಟಲ್ ಹೆರಿಟೇಜ್ ವತಿಯಿಂದ ಸಮಗ್ರ ಸಮಿಕ್ಷೆ ನಡೆಸಲಾಗುತ್ತಿದೆ.

ಈಗಾಗಲೆ ಮೊದಲನೆ ದಿನದಲ್ಲಿ ತಾಲೂಕಿನ ಮುದಗಲ್ , ವಂದಲಿ ಮುಂತಾದ ಕಡೆಯಲ್ಲಿ ಮಾಡಲಾಗಿದ್ದು ಬುಧವಾರದಂದು ಲಿಂಗಸಗೂರು ಪುರಸಭೆ ವ್ಯಾಪ್ತಿಯ ಕರಡಕಲ್, ಹಾಗೂ ಬಿಲ್ಲಮರಾಯನಗುಡ್ಡ, ಜಲದುರ್ಗದಲ್ಲಿ ಗುರುವಾರದಂದು ಹೊನ್ನಳ್ಳಿ,ಗೌಡೂರು,ಮಾಚನುರು ಮುಂತಾದ ಕಡೆಗಳಲ್ಲಿ ಮಾಡಲಾಗುತ್ತಿದೆ ಎಂದು ತಂಡದ ಜಿ ರಾಜಸೇಖರ ತಿಳಿಸಿದರು.
ರಾಜ್ಯ ಪುರಾತತ್ವ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಕರ್ನಾಟಕ ಡಿಜಿಟಲ್ ಹೆರಿಟೇಜ್ ಸರ್ವೇಕಾರ್ಯ ಮಾಡಲಾಗುತ್ತಿದೆ. ರಾಜ್ಯದ ಪುರಾತನ ಸ್ಮಾರಕಗಳ ಡಿಜಲೀಕರಣದ ಮುಖಾಂತರ ದಾಖಲೆ ಮಾಡುತ್ತಿರುವ ತಂಡವು ತಾಲೂಕಿಗೆ ಬಂದಿದ್ದು ತಾಲೂಕಿನ ಪಾರಂಪರಿಕ ಸ್ಮಾರಕಗಳನ್ನು ತ್ರಿಡಿ ಡಿಜಿಟಲೀಕರಣ ಮಾಡಲಾಗುತ್ತಿದ್ದು ಇದು ಮುಂದಿನ ದಿನಗಳಲ್ಲಿ ಸ್ಮಾರಕವು ಹಾಳಾದರು ಅದರ ನಕ್ಷೆ ಸ್ಥಳ ಮತ್ತು ಅದರ ವಿನ್ಯಾಸ ಎಲ್ಲವನ್ನು ನೋಡಬಹುದಾದಂತ ತಂತ್ರಜ್ಞಾನದೊಂದಿಗೆ ದಾಖಲಿಸಲಾಗುತ್ತಿದೆ ಎಂದು ತಂಡದ ಪ್ರಮುಖ ಸಮಿಕ್ಷೆಗಾರರು ಮಾಹಿತಿ ನೀಡಿದ್ದಾರೆ.
ದಾಖಲೀಕರಣ: ಜಿಪಿಎಸ್ ತಂತ್ರಜ್ಞಾನ ಬಳಸಿ ಪಾರಂಪರಿಕ ಕಟ್ಟಡಗಳ ಭೌಗೋಳಿಕ ಸ್ಥಳಗುರುತು, ತ್ರಿಡಿ ಮಾಡೆಲಿಂಗ್ ತಯಾರಿ, ಜಿಯೋ ಸ್ಪೇಷಿಯಲ್ ಟೆಕ್ನಾಲಾಜಿ ಮೂಲಕ ಪೋಟೋಗ್ರಾಫ್ ಡೇಟಾಭೇಸ್ ಸೃಷ್ಟಿಯ ಉದ್ದೇಶ ಇದರಲ್ಲಿದೆ ತ್ರಿಡಿ ಪಾಯಿಂಟ್ ಕ್ಲೌಡ್ಸ್ ಡೇಟಾ ತ್ರಿಡಿ ಮಶ್ ಮಾಡೆಲ್ಸ್ ಮತ್ತು ತ್ರಿಡಿ ಮಾಡೆಲ್ಸ್ ಕ್ಯಾಡ್ ಡ್ರಾಯಿಂಗ್ ಎಲಿವೇಷನ್ ಮುಖೇನ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ನವೀಕರಣ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಈಗಾಗಲೆ ತಾಲೂಕಿನ ಹಲವಾರು ಸ್ಮಾರಕಗಳು ಹಾಳಾಗಿದ್ದು ಅಳಿದುಳಿದ ಸ್ಮಾರಕಗಳನ್ನಾದರು ದಾಖಲಿಕರಿಸುವ ಕೇಲಸ ಮಾಡುತ್ತಿರುವುದು ಇತಿಹಾಸ ಪ್ರಿಯರಿಗೆ ಸಂತಸ ತಂದಿದೆ ಎಂದು ಹೆಳಬಹುದು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮುಖ್ಯ ವೈಜ್ಞಾನಿಕ ಅಧಿಕಾರಿಯಾದ ಡಾ .ಯು,ಟಿ ವಿಜಯ ರವರ ಮಾರ್ಗದರ್ಶನದಲ್ಲಿ ಜಿ ರಾಜಶೇಖರ, ಅನೀಲ್ ಕುಮಾರ ಬಸ್ನೆ, ವಿನಿತ್ ಕುಮಾರ ಎಸ್ ಆರ್, ಸರ್ವೆತಂಡದಲ್ಲಿದ್ದಾರೆ ಇತಿಹಾಸ ಸಂಶೋಧಕರು ಸ್ಥಳಿಯರಾದ ಅಶೋಕ ನಾಯಕ ದಿದ್ದಿಗಿ ಮತ್ತು ಉದಯಕುಮಾರ ಅಮೀನಗಡ ತಂಡದ ಸಮಿಕ್ಷೆದಾರರಿಗೆ ಸಾಥ್ ನೀಡಿದರು.

Don`t copy text!