ಮಿಲನ
ಸನಿಹಕೆ ಬಂದನೆ
ಜೊತೆಯಾಗಿ ನಿಂತನೆ
ಅರಳಿದ ಮಲ್ಲಿಗೆ ತಂದು
ನಗುವ ಚೆಲ್ಲಿದನೆ
ಮಂಜಿನ ಹನಿಗಳಲ್ಲಿ ನಿಂತನೆ
ಕನಸುಗಳ ತೋರಿದನೆ
ಹೂಗಳ ಮಿಲನಕೆ ನಿಂತನೆ
ನೋಡಲು ಆತುರದಲ್ಲಿ ಬಂದನೆ
ಕಾತುರದಲ್ಲಿ ಮುನಿದನೆ
ತರಾಟೆಗೆ ಸಿದ್ಧನಾದ
ನೋಡುತ್ತಲೇ ಮೈ ಮರೆತನೆ
ಶುಭ್ರ ಸ್ನೇಹದಲ್ಲಿ ನಿಂತನೆ
ಕಂಪ ಸೂಸಿ ಮನ ಸೆಳೆದನೆ
ನೋಡುಗರ ಕಂಗೊಳಿಸಿ
ಹಿತವ ತಂದನೆ
–ಮಾಜಾನ್ ಮಸ್ಕಿ