ಸಮುದ್ರದಡೆಗೆ ಸಾವಿರ ಹೆಜ್ಜೆಗಳು
ಶ್ರೀ ರಾಗಂ ಅವರಿಂದ ರಚಿತವಾದ ಕನ್ನಡ ಸಾಹಿತ್ಯಲೋಕಕ್ಕೆ ಅಪರೂಪದ ಸಾಹಿತ್ಯ ಕುಸುಮ ದಂಡಿ ಕಾದಂಬರಿ. ಸಮುದ್ರದ ದೆಡೆಗೆ ಸಾವಿರದ ಹೆಜ್ಜೆಗಳು ಕಾದಂಬರಿ ನಮ್ಮ ದೇಶದ ಪ್ರತಿಯೊಬ್ಬ ದೇಶಭಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಓದಲೇಬೇಕಾದ ಕೃತಿ. ನಮಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ರೂಢಿ ಇದೆ ಆದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳು, ಅಂದಿನ ಘಟನೆಗಳು, ಮಹಾತ್ಮ ಗಾಂಧೀಜಿಯವರ ಆದರ್ಶಗಳು, ಸತ್ಯಾಗ್ರಹದ ತಯಾರಿ, ಸ್ವತಂತ್ರ ಹೋರಾಟಗಾರರ ಆದರ್ಶಗಳು, ಅಹಿಂಸೆಯಲ್ಲಿ ಅವರು ಇಟ್ಟ ನಂಬಿಕೆಗಳು ಕುರಿತಾಗಿ ನಾವು ದಂಡಿ ಕಾದಂಬರಿಯಲ್ಲಿ ತಿಳಿಯಬಹುದು
ದಂಡಿ ಕಾದಂಬರಿ ಯಲ್ಲಿ ದಂಡಿ ಕಥಾ ನಾಯಕ. ಉಪ್ಪಿನ ಸತ್ಯಾಗ್ರಹ ಹಾಗೂ ರಾಷ್ಟ್ರೀಯ ಆದರ್ಶಗಳು, ರಾಷ್ಟ್ರಪ್ರೇಮ ,ಬ್ರಿಟಿಷರ ದಬ್ಬಾಳಿಕೆ ಸುತ್ತ ಕಥೆಯಿದೆ ಅಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವತಂತ್ರ ಹೋರಾಟಗಾರರು ಉಪ್ಪಿನ ಸತ್ಯಾಗ್ರಹ ಚಳುವಳಿ ಮಾಹಿತಿಯನ್ನು ಕಾದಂಬರಿ ಹೊಂದಿದೆ
ಮಕ್ಕಳಿಗೆ ರಾಷ್ಟ್ರಪ್ರೇಮದ ಪರಿಕಲ್ಪನೆಯನ್ನು ಮೂಡಿಸಲು ಸತ್ಯಾಗ್ರಹ ಮಾಡಿದ ಮಹನೀಯರ ಆದರ್ಶಗಳು ಅಹಿಂಸೆಯಲ್ಲಿ ಅವರು ಹೊಂದಿದ ನಂಬಿಕೆಯನ್ನು ತಿಳಿಸಲು ಈ ಕಾದಂಬರಿಯ ಓದಿನ ಅವಶ್ಯಕತೆಯಿದೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ನಾವು ಈ ಕಾದಂಬರಿಯ ಮೂಲಕ ರಾಷ್ಟ್ರಪ್ರೇಮವನ್ನು ಮಕ್ಕಳಲ್ಲಿ ಮೂಡಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಮಕ್ಕಳು ಈ ಕಾದಂಬರಿಯನ್ನು ಓದಲೇಬೇಕು
ಮಾಸ್ತಿಕಟ್ಟೆಯ ಮೂಲಕ ಪ್ರಾರಂಭವಾಗುವ ಕಾದಂಬರಿ ಹಿಂಸೆ, ಪ್ರತೀಕಾರ ,ಕೋಪದಿಂದ ಕೂಡಿದ ದಂಡಿಯ ಮೂಲಕ ಪ್ರಾರಂಭವಾಗುತ್ತದೆ ನಂತರ ಸ್ವಾತಂತ್ರಹೋರಾಟಗಾರರ ಸಂಪರ್ಕದಿಂದ ಅವನು ಅಹಿಂಸಾ ಮಾರ್ಗವನ್ನು ಅನುಸರಿಸುತ್ತಾರೆ ಅವನು ಗಾಂಧೀಜಿಯವರ ಆದರ್ಶಗಳ ಅನುಯಾಯಿಯಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾನೆ ಅಹಿಂಸೆಯ ಮಹತ್ವವನ್ನು ಅರಿತು ಚಳುವಳಿಗಾರರ ಜೊತೆ ಸೇರಿ ಹೋರಾಟವನ್ನು ಪ್ರಾರಂಭಿಸುತ್ತಾನೆ. ಈ ಕಾದಂಬರಿ ಓದುಗನನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುತ್ತದೆ ಕಾದಂಬರಿಯ ನಡುವೆ ಸ್ವಾತಂತ್ರಹೋರಾಟಗಾರರ ಬದುಕು ಅವರಿಗೆ ನೀಡಿದ ಹಿಂಸೆ ಕಿರುಕುಳ ನೆನೆದು ಕಣ್ಣೀರು ಬರುತ್ತದೆ ದೇಶಕ್ಕಾಗಿ ಅವರು ಮಾಡಿದ ತ್ಯಾಗ ದೊಡ್ಡದು ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ
ಕರಾವಳಿ ವಾತಾವರಣದಲ್ಲಿ ನಡೆಯುವ ಘಟನೆಗಳು ಚಳುವಳಿಗಾರರ ಚಟುವಟಿಕೆಗಳು ಹಣಕ್ಕಾಗಿ ಬ್ರಿಟಿಷರ ಪರವಾಗಿ ಕೆಲಸ ಮಾಡುವ ನಮ್ಮವರು ಬ್ರಿಟಿಷರೊಂದಿಗೆ ಕೆಲಸ ಮಾಡುತ್ತಾ ಚಳವಳಿಗಾರರಿಗೆ ಸಹಾಯಮಾಡುವ ಹಾಗೂ ಅವರ ಬಗ್ಗೆ ಅನುಕಂಪ ಹೊಂದಿದ ದೇಶಭಕ್ತರು. ಉಪ್ಪಿನ ಸತ್ಯಾಗ್ರಹದ ಕರೆಗೆ ಓಗೊಟ್ಟು ರಾಜ್ಯದ ಮೂಲೆಮೂಲೆಯಿಂದ ಕಾಲ್ನಡಿಗೆಯಲ್ಲಿ ಬಂದು ಸೇರಿದ ಚಳುವಳಿಕಾರರು ಉಪ್ಪನ್ನು ತಯಾರಿಸಿ ಅದನ್ನು ದಂಡಿಯ ಮಹಾಪ್ರಸಾದವೆಂದು ಸೇವಿಸಿದ ಚಳುವಳಿಕಾರರು . ಈ ಕಾದಂಬರಿ ಒಂದು ರೋಮಾಂಚನಕಾರಿ ಅನುಭವ ನೀಡುತ್ತದೆ
ಪರಂಗಿ ಸರಕಾರ ಹಾಗೂ ಅವರ ಧಮನಕಾರಿ ನೀತಿಗಳು ಸತ್ಯಗ್ರಹ ಮಾಡಲು ಪಡುವ ಪಡಿಪಾಟಲು, ಸತ್ಯಾಗ್ರಹ, ಚಳುವಳಿಗಳು, ಹಾಗೂ ಪರಂಗೀ ಸರಕಾರಗಳ ಒಡೆದು ಆಳುವ ನೀತಿ ಅದರ ನಡುವೆ ಅಹಿಂಸೆ ಮೂಲಕ ಸಾಗುವ ಹೋರಾಟ ,ಹಾಲಕ್ಕಿಗಳ ಹೋರಾಟ ಉಪ್ಪಿನ ಸತ್ಯಾಗ್ರಹ ಹೋರಾಟ,ಮನೆ ಮಠ ಆಸ್ತಿಗಳನ್ನು ಕಳೆದು ಕೊಂಡು ಬ್ರಿಟಿಷರಿಂದ ಹಿಂಸೆಗೆ ಒಳಪಡುವ ಚಳುವಳಿಕಾರರು ಕುಟುಂಬಗಳು, ಯಾವುದಕ್ಕೂ ಹೆದರದೆ ಚಳುವಳಿಯಲ್ಲಿ ಮುಂದುವರೆಯುವ ದೇಶಪ್ರೇಮಿಗಳು. ನಮ್ಮ ಕಣ್ಣ ಮುಂದೆ ನಡೆದ ಘಟನೆಗಳ ಥರ ಬಂದುಹೋಗುತ್ತವೆ
ದಂಡಿ ಕಾದಂಬರಿಯನ್ನು ಪ್ರತಿಯೊಬ್ಬರು ಓದಿ ದೇಶಭಕ್ತರ ಬಗ್ಗೆ ಅಭಿಮಾನ ಮೂಡುತ್ತದೆ ಚಳುವಳಿಕಾರರು ತ್ಯಾಗದ ಬಗ್ಗೆ ಹೆಮ್ಮೆಯೆನಿಸುತ್ತದೆ ಕನ್ನಡ ಸಾಹಿತ್ಯಲೋಕಕ್ಕೆ ಒಂದು ಅವಿಸ್ಮರಣೀಯ ಕೃತಿ ಶ್ರೀ ರಾಗಂ ಅವರಿಂದ ರಚಿತವಾಗಿದೆ.
-ಶ್ರೀ ಶಂಕರ ದೇವರು ಹಿರೇಮಠ