ಬಳಗಾನೂರು ಮತ್ತು ತುರ್ವಿಹಾಳ ಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

ಬಳಗಾನೂರು ಮತ್ತು ತುರ್ವಿಹಾಳ ಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

e- ಸುದ್ದಿ ಮಸ್ಕಿ

ತಾಲೂಕಿನ‌ ದೊಡ್ಡ ಪಟ್ಟಣಗಳಾದ ಬಳಗಾನೂರು ಮತ್ತು ತುರ್ವಿಹಾಳ ಗ್ರಾಮಗಳಿಗೆ ಬಸ್ ನಿಲ್ದಾಣ ನಿರ್ಮಿಸುವಂತೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ‌ ಮಾಡಿದರು.
ಪಟ್ಟಣದ ಬಿಜೆಪಿ ಕಚೇರಿಗೆ ಶುಕ್ರವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಆಗಮಿಸಿದಾಗ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮನವಿ ಮಾಡಿದರು.
ಬಹುದಿನಗಳ ಬೇಡಿಕೆಯಾದ ಬಸ್ ನಿಲ್ದಾಣ ಕಾಮಾಗಾರಿ ಆರಂಭಿಸಬೇಕು. ಹಾಗೆಯೇ‌ ಮಸ್ಕಿ ಬಸ್ ಡಿಪೋಗೆ ಹೊಸ ಸ್ಲೀಪರ್ ಕೊಚ್ ಬಸ್ ಒದಗಿಸುವಂತೆ‌ ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ , ಅಪ್ಪಾಜಿಗೌಡ, ಪ್ರಸನ್ನ ಪಾಟೀಲ ಇದ್ದರು.

 

 

 

 

Don`t copy text!