ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ- ಆರ್. ಬಸನಗೌಡ ತುರ್ವಿಹಾಳ
e- ಸುದ್ದಿ ಮಸ್ಕಿ
ಪಟ್ಟಣದ ಗಾಂಧಿ ನಗರದ ಸಾರ್ವಜನಿಕರಿಗೆ ಕುಡಿಯುವ ನೀರು, ಪಡಿತರ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಗಾಂಧಿ ನಗರದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ‘ಗಾಂಧಿ ನಗರದಲ್ಲಿ ನಾಲ್ಕು ವಾರ್ಡ್ ಗಳು ಬರುತ್ತಿದ್ದು, ಕುಡಿಯುವ ನೀರಿಗಾಗಿ ಪ್ರತ್ಯೇಕ ಟ್ಯಾಂಕ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು, ಸಮರ್ಪಕ ಪಡಿತರ ವಿತರಣೆಗಾಗಿ ಪ್ರತ್ಯೇಕ ನ್ಯಾಯ ಬೆಲೆ ಅಂಗಡಿ ಮುಂಜೂರು ಮಾಡಿಸಲಾಗುವುದು.
ಚರಂಡಿ ಹಾಗೂ ಹಳ್ಳಕ್ಕೆ ತಡೆಗೋಡೆ ಸೇರಿದಂತೆ ಇಲ್ಲಿಯ ನಿವಾಸಿಗಳು ಸಲ್ಲಿಸಿದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಮುಖಂಡ ಸಿದ್ದಣ್ಣ ಹೂವಿನಭಾವಿ. ದೊಡ್ಡ ಕರಿಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಮೈಬೂಸಾಬ ಮುದ್ದಾಪೂರ, ಸಿ. ದಾನಪ್ಪ, ನಾಗರಬೆಂಚಿ, ಸದ್ದಾಂ, ದುರ್ಗರಾಜ ವಟಗಲ್ ಇತರರು ಇದ್ದರು.