ಮಸ್ಕಿ : ಮಸ್ಕಿ ಪಟ್ಟಣದಲ್ಲಿ ಹಳ್ಳದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವ ಮಡಿವಾಳ ಕುಟುಂಬಕ್ಕೆ ಸಂಸದ ಕರಡಿ ಸಂಗಣ್ಣ ಶನಿವಾರ ಭೇಟಿ ನೀಡಿ ಪತ್ನಿ ನೇತ್ರಮ್ಮಳಿಗೆ ಸಾಂತ್ವಾನ ಹೇಳಿದರು. ವಯಕ್ತಿಕವಾಗಿ 10 ಸಾವಿರ ರೂ ಸಹಾಯ ಧನ ನೀಡಿದರು.
ಸರ್ಕಾರದಿಂದ ಸಿಗಬಹುದಾದ ಎಲ್ಲಾ ರೀತಿಯ ನೆರವು ಕೊಡಿಸುವುದಾಗಿ ಭರವಸೆ ನೀಡಿದರು. ಬಿಜೆಪಿ ಹಿರಿಯ ಮುಖಂಡ ಮಹಾದೇವಪ್ಪಗೌಡ ಪಾಟೀಲ, ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಯುವಕರಾದ ಅಭಿಜಿತ ಪಾಟೀಲ, ನಾಗರಾಜ ಯಂಬಲದ, ಅಮರೇಶ ಮಾಟೂರು, ಕೃಷ್ಣ ಚಿಗರಿ ಹಾಗೂ ಇತರರು ಇದ್ದರು.