ಮಸ್ಕಿ : ತಾಲೂಕಿನ ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಬಾಳ ಸೀಮಾದ ತುಂಗಭದ್ರ ಎಡದಂಡೆ ಕಾಲುವೆ 55 ರಲ್ಲಿ ಅನಾಥ ಬಾಲಕನ ಶವ ಶನಿವಾರ ಪತ್ತೆಯಾಗಿದೆ ಎಂದು ಬಳಗಾನೂರು ಪಿಎಸ್‍ಐ ಶಂಭುಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ಬಾಲಕನ ಕೈ ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿ ತುಂಗಭದ್ರ ಎಡದಂಡೆ ಕಾಲುವೆಯಲ್ಲಿ ತೆಲಿಕೊಂಡು ಹೋಗುತ್ತಿದ್ದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ.
ಬಾಲಕ ಮಲ್ಲಿಕಾರ್ಜುನ ಃ ಅನಾಥ ಶವವಾಗಿ ಸಿಕ್ಕ ಬಾಲಕ ಕಾರಟಗಿಯ ಮಲ್ಲಿಕಾರ್ಜುನ (10) ಎಂದು ಗುರುತಿಸಲಾಗಿದೆ. ಅ.23 ರಂದು ಕಾಣೆಯಾಗಿದ್ದು ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ.