ಅಂತರಗಂಗಿಯಲ್ಲಿ ಮರಿಬಸವಲಿಂಗ ಜಾತ್ರೆ

ಮಸ್ಕಿ : ಮಸ್ಕಿ ಸಮೀಪದ ಅಂತರಗಂಗಿಯಲ್ಲಿ ಶನಿವಾರ ಉಟಕನೂರ ಶ್ರೀ ಮರಿಬಸವಲಿಂಗ ತಾತನವರ 18 ನೇಯ ಜಾತ್ರಾ ಮಹೋತ್ಸವ ಜರುಗಿತು.

ಬೆಳ್ಳಿಗ್ಗೆ ಶ್ರೀ ಶಿವಪೂತ್ರಯ್ಯಸ್ವಾಮಿ ಮೂಲಿಮಠ ಮೇದಿಕಿನಾಳ ಇವರಿಂದ ಶ್ರೀ ಮರಿಬಸವಲಿಂಗ ತಾತನವರ ಗದ್ದುಗೆಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಗಣಾರಾಧನೆಯೊಂದಿಗೆ ಸಾರ್ವಜನಿಕರಿಗೆ ಮಹಾಪ್ರಸಾದ ಸಮರ್ಮಿಪಿಸಲಾಯಿತು.

ಸಂಜೆ 6.00 ಗಂಟೆಗೆ ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಭಜನೆ, ಸುಮಂಗಳೆಯರು ಆರುತಿಯೊಂದಿಗೆ ಉಚ್ಚಾಯ ಉತ್ಸವ ನೆರವೆರಿತು. ಈ ಸಂದರ್ಭದಲ್ಲಿ ಗವಿಯಪ್ಪಗೌಡ ಪೋಲಿಸ್ ಪಾಟೀಲ. ಗುರಪ್ಪ ಹಳ್ಳಿ. ಪಂಪಯ್ಯಸ್ವಾಮಿ ಸಾಲಿಮಠ. ಘನಮಠದಯ್ಯ ಪುರಾಣಿಮಠ. ಲಕ್ಷ್ಮಣಸಿಂಗ್ ರಜಪೂತ. ತಿರುಪತಿ ಪೂಜಾರಿ .ಶರಣಬಸಪ್ಪ ಹಳ್ಳಿ. ಹನಮಂತ ತಳವಾರ. ಸಂಗಯ್ಯ ಪುರಾಣಿಕಮಠ. ಹನುಮಣ್ಣ ನಂದಿಹಾಳ. ವಿರೇಶ ಚಿಕ್ಕ ಅಂತರಗಂಗಿ.ಕನಕರಾಯ ಕರ್ಲಿ.ಅಮರೇಶ ಬೆಲ್ಲದಮರಡಿ. ಬೆಂಜುಮನ್.ವಿಗ್ನೇಶ.ರಾಜಪ್ಪ ಹರಿಜನ. ಹಾಗೂ ಇತರರು ಇದ್ದರು

Don`t copy text!