ಮನಸ್ಸು

ಮನಸ್ಸು

ಮನಸೆ ನೀನೆಕೆ ಹೀಗೆ
ಹತ್ತು ಹಲವು ಯೋಚನೆ
ಹಲವಾರು ಭಾವ
ಹತ್ತಾರು ಕನಸು
ಹೊತ್ತೊ ಸಾಗುವೆ ನೀನು ||

ಸಂಕಲ್ಪ ಸಾಧಿಸಲು
ಸಾಧನೆಯ ಹಾದಿಯಲಿ
ನೋವು ನಲಿವಿನಲಿ
ಹಿಗ್ಗುತಲಿ ಕುಗ್ಗುತಲಿ
ಮುಂದೆ ಸಾಗುವೆ ನೀನು ||

ಒಮ್ಮೊಮ್ಮೆ ಮೃದು ನೀನು
ಮತ್ತೊಮ್ಮೆ ಕಠಿಣ
ಪ್ರೀತಿ ಆಗರವು
ದಯೆಯ ಸಾಗರವು ||

ಪ್ರೀತಿಯಲಿ ಅರಳುವೆ
ಕೋಪದಲಿ ಕೆರಳುವೆ
ನೋವಿನಲಿ ನರಳುವೆ
ಎತ್ತೆತ್ತಲೋ ಹೊರಳುವೆ ||

ನೀನೊಂದು ವಿಸ್ಮಯ
ನನಗರಿಯದಾ ವಿಷಯ
ನೂರಾರು ಸಂಶಯ
ನೀಗು ಮನದ ಕೊಳೆಯ

ವೀಕ್ಷಕನು ನೀನು
ಸಾಕ್ಷಿ ಭಾವದಿ ನಿಲ್ಲು
ಆಕ್ಷೇಪಣೆ ಬೇಡ
ಪ್ರೇಕ್ಷಕನಾಗು ಸಂಯಮದಿ

ಸವಿತಾ ಮಾಟೂರ ಇಲಕಲ್ಲ

Don`t copy text!