ಸಂತೆಕೆಲ್ಲೂರು ತಲುಪಿದ ರೈತ ಜಾಗೃತಿ ಜಾಥ
e- ಸುದ್ದಿ ಮಸ್ಕಿ
ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ಕಾಲುವೆ ಬದಲು ಡ್ರಿಪ್ ಪದ್ದತಿ ಅಳವಡಿಸುತ್ತಿರುವದನ್ನು ರೈತರು ವಿರೋಧಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆ ಕುರಿತು ಯೋಜನಾ ವ್ಯಪ್ತಿಯ ಹಳ್ಳಿಗಳಲ್ಲಿ ಜನ ಜಾಗೃತಿ ಮೂಡಿಸುವ ಜಾಗೃತಿ ಜಾಥ ನಡೆಸಿದರು.
ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಸೋಮವಾರ ಆಗಮಿಸಿದ ರೈತ ಜಾಥ ಕುರಿತು ಹೋರಾಟಗಾರ ಮಾನಸಯ್ಯ
ಈ ಯೋಜನೆಯಲ್ಲಿ ರೈತರಿಗಾಗಿ ಆಗುವ ತೊಂದರೆಗಳನ್ನು ಕುರಿತು ವಿವರಿಸಿದರು.
ಜಾಥಾದಲ್ಲಿ ಆರ್.ಮಾನಸಯ್ಯ, ಬಸವರಾಜ ಹಿರೇಹೆಸರೂರು,ರಮೇಶ ವೈ ತಳವಾರ, ಅನಿಲಕುಮಾರ ,ಚಿನ್ನಪ್ಪ ಕೊಟ್ರಕಿ , ತಿಪ್ಪಣ್ಣ ಚಿಕ್ಕಹೇಸರೂರು , ತಿಪ್ಪರಾಜ ಗೆಜ್ಜಲಗಟ್ಟಾ, ಅಮರೆಗೌಡ ,ಗಂಗಾಧರ , ರಮೇಶ ಹಿರೇಹೇಸರೂರು, ಶಿವನಗೌಡ, ಬೋಜಸಾಬ ಗೆಜ್ಜಲಗಟ್ಟಾ ಮುಂತಾದವರು ಜಾಥಾದ ಪ್ರಚಾರ ತಂಡದಲ್ಲಿದ್ದರು.