ವಿಜ್ರಂಭಣೆಯಿಂದ ನೆಡೆದ ಕೆರೆ ದುರ್ಗಾದೇವಿ ರಥೋತ್ಸವ
e-ಸುದ್ದಿ ಮಸ್ಕಿ
ತಾಲುಕಿನ ಹಸಮಕಲ್ ಗ್ರಾಮದ ಶ್ರೀ ಕೆರೆ ದುರ್ಗಾದೇವಿ ಪುರಾಣ ಮಹಮಂಗಲ ಮತ್ತು ರಥೋತ್ಸವ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ಜರಗಿತು.
ನವರಾತ್ರಿಯ ಪದ್ದತಿಯಂತೆ ಒಂಬತ್ತು ದಿನಗಳ ವರೆಗೆ ದೇವಿಯ ಪುರಾಣ ಕಾರ್ಯಕ್ರಮ ಜರುಗಿತು. ಶುಕ್ರವಾರ ಕೊನೆಯ ದಿನದಂದು ಬೆಳಿಗ್ಗೆ ಪುರುಷರಿಂದ ಉಚ್ಚಾಯ ತದನಂತರ ಮಹಿಳೆಯರು ಕುಂಬೋತ್ಸವ ದುರ್ಗಾದೇವಿ ಭಾವಚಿತ್ರ ಮೆರವಣಿಗೆ ಮತ್ತು ಸಂಜೆ ಮಹಿಳೆಯರು ರಥ ಎಳೆಯುವ ಮೂಲಕ ಸಂಪನ್ನಗೊಳಿಸಿದರು. ಮಸ್ಕಿಯ ವರರುದ್ರಮುನಿ ಮಹಾಸ್ವಾಮಿಗಳು, ಶಾಸಕ ಬಸವನಗೌಡ ತುರುವಿಹಾಳ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್. ಮಲ್ಲಿಕಾರ್ಜುನ ಯದ್ದಲದಿನ್ನಿ. ಹನುಮಂತಪ್ಪ ಮುದ್ದಾಪುರ. ಗೋವಿಂದಪ್ಪ ನಾಯಕ. ಸತೀಶ್ ಗೌಡ ಮತ್ತು ಊರಿನ ಹಿರಿಯರು ಮುಖಂಡರು ಭಾಗಿಯಾಗಿದ್ದರು