ಅದ್ದೂರಿಯಾಗಿ ಜರುಗಿದ ಭ್ರಮರಾಂಬಾ ದೇವಿ ಉತ್ಸವ
e-ಸುದ್ದಿ ಮಸ್ಕಿ
ಪ್ರತಿ ವರ್ಷ ಮೈಸೂರು ಮಾದರಿ ಜಂಬೂ ಸವಾರಿ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ನಡೆಯುತ್ತಿದ್ದ ಪಟ್ಟಣದ ಭ್ರಮರಾಂಭಾ ದೇವಿ ಪುರಾಣ ಮಂಗಲೋತ್ಸವ ಕೊವಿಡ್ -19 ನಿಯಮ ಹಿನ್ನೆಲೆಯಲ್ಲಿ ಬುಧವಾರ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಬೆಳಿಗ್ಗೆ ಗಂಗಾಸ್ಥಳದಿಂದ ಬೆರಳಣಿಕೆಯಷ್ಟು ಮಹಿಳೆಯರ ಕುಂಭದೊಂದಿಗೆ ಭ್ರಮರಾಂಬಾ ದೇವಿಯ ವಿಗ್ರಹ ಹಾಗೂ ದೇವಿ ಪುರಾಣದ ಕಟ್ಟನ್ನು ಪಲ್ಲಕ್ಕಿ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು.
ಗಂಗಾಸ್ಥಳದಿಂದ ತಂದ ಕುಂಭದಿಂದ ಭ್ರಮರಾಂಬಾ ದೇವಿಯ ವಿಗ್ರಹಕ್ಕೆ ಅಭಿಷೇಕ ನಡೆಸಲಾಯಿತು. ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ದೇವಿಯ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಭ್ರಮರಾಂಬಾ ದೇವಿಯ ರಥವನ್ನು ದೇವಸ್ಥಾನದ ಆವರಣದಲ್ಲಿ ಸೇರಿದ್ದ ಮಹಿಳೆಯರು ಸಾಂಕೇತಿಕವಾಗಿ ಎಳೆಯುವ ಮೂಲಕ ನವರಾತ್ರಿ ಉತ್ಸವವಕ್ಕೆ ತೆರೆ ಎಳೆದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಶಾಸಕ ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ದೇವಸ್ಥಾನ ಸಮಿತಿ ಮುಖಂಡರು ಭಾಗವಹಿಸಿದ್ದರು.