ಚೆನ್ನವ್ವ ತಾಯಿ

ಚೆನ್ನವ್ವ ತಾಯಿ

ಅವಳು
ಮಲ್ಲಸರ್ಜನ ರಾಣಿ
ಅಲ್ಲ ಚಂಡಿ
ಚಾಮುಂಡಿ
ದುರ್ಗೆ ಕಾಳಿ
ಕೆಂಪು ಮೋತಿ
ಮಂಗಗಳಿಗೆ
ಕಲಿಸಿದಳು
ಪಾಠ
ಸಿಕ್ಕ ಸಿಕ್ಕ
ವೈರಿಗಳ
ರುಂಡ
ಚೆಂಡಾಡಿದಳು
ಸಿಂಹಿಣಿ
ಮೊಳಗಿತು
ಸ್ವಾತಂತ್ರ ಕಹಳೆ
ತೃಪ್ತವಾಯಿತು
ಕಿತ್ತೂರು ನೆಲವು
ಬಂಟ ರಾಯಣ್ಣ
ಅಮಟೂರು
ಬಾಳಾಸಾಹೇಬ
ಅವರಡಿ ವೀರಪ್ಪ
ಸರ್ದಾರ ಗುರುಸಿದ್ದಪ್ಪ
ಥ್ಯಾಕರೆ ಹೆಣ ಉರುಳಿತು
ಗೆದ್ದ ಬೀಗದಲಿ
ಮರೆತ ಜನ
ವಾಡೆಯಲ್ಲಿ ಮಸಲತ್ತು
ಸಗಣಿಯಲಿ ಮದ್ದು
ಗುಂಡು ಬೆರಿಸಿದರು
ವಂಚನೆಗೆ
ಬಲಿ ಆಯ್ತು
ವೀರ ಧೀರರ ಭೂಮಿ
ಸೋತ ಚೆನ್ನವ್ವ
ನಿಟ್ಟುಸಿರು ಬಿಟ್ಟಳು
ಮೋಸಕೆ
ನಾಡು ನುಡಿಗೆ
ಜ್ಯೋತಿಯಾದಳು
ಕನ್ನಡತಿ ಶೂರಮಣಿ
ನಿಲ್ಲದ ಕದನ
ಸ್ವಾರ್ಥಕೆ ಬಲಿಯಾಯ್ತು
ಬಯಲು ಹೊಂಗಲ
ಭೂಮಿ
ಬರಿದಾಯ್ತು
ಮಸಣಕೇರಿ
ಗಳಗಳನೆ ಅತ್ತವು
ಕೂಸು ಕಂದಮ್ಮಗಳು
ಹರಿಯಿತು ಕೋಡಿ
ಯುದ್ಧದಿ
ಮಣ್ಣಲ್ಲಿ ಮಣ್ಣಾದಳು
ಚೆನ್ನವ್ವ ತಾಯಿ


ಡಾ ಶಶಿಕಾಂತ ಪಟ್ಟಣ
ಇಂದು ಕಿತ್ತೂರಿನ ವಿಜಯೋತ್ಸವ ಬ್ರಿಟಿಷ್ ಸರ್ಕಾರ ಸೋಲಿಸಿ ಭಾರತದ ನೆಲದಲ್ಲಿ ಸ್ವಾತಂತ್ರ ಹೋರಾಟದ ಮುನ್ನುಡಿ ಬರೆದ ರಾಣಿ ಚೆನ್ನಮ್ಮ ತಾಯಿ

Don`t copy text!