ಗಾಂಧಿಗೊಂದು ಪತ್ರ

ಪುಸ್ತಕ ಪರಿಚಯ

ಗಾಂಧಿಗೊಂದು ಪತ್ರ

ವೃತಿಯಿಂದ ಔಷಧ ವಿಜ್ಞಾನಿಯಾಗಿದ್ದರು, ಪ್ರವೃತ್ತಿಯಿಂದ ಲೇಖಕರಾಗಿರುವ ಡಾ. ಶಶಿಕಾಂತ ಪಟ್ಟಣ ರವರ ಹೊಸ ಕವನ ಸಂಕಲನ ‘ಗಾಂಧಿಗೊಂದು ಪತ್ರ’.

ಈಗಾಗಲೆ ೨ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಒಟ್ಟು ೬೦ ಕವನಗಳನ್ನು ಒಳಗೊಂಡಿದೆ. ಬಂಡಾಯ, ಸ್ನೇಹ, ಪ್ರೇಮಗಳೆ, ಸಮಕಾಲಿನ ಸಂಗತಿಗಳೇ ಕಾವ್ಯದ ವಸ್ತು. ಅವರೇ ಹೇಳುವಂತೆ ಪ್ಕಾಬ್ಮೋನೆರೂದ ಪುಷ್ಕಿನ್ ಇವರ ಬಂಡಾಯ ಕವಿತೆಯ ಬರವಣಿಗೆಗೆ ಸ್ಪೂರ್ತಿಯಾದರೆ ,ಡಬ್ಲುö್ಯ. ಬಿ.ಎಟ್ಸ್, ಶೆಲ್ಲಿ, ವರ್ಡ್ಸವರ್ತ, ಈಲಿಯಟ್ ಇವರು ಪ್ರೇಮ ಕವನಗಳಿಗೆ ಸ್ಪೂರ್ತಿಯಾಗಿದ್ದಾರೆ.


“ ಗಾಂಧಿಗೊಂದು ಪತ್ರ” ಕವನವು ಗಾಂಧಿಯ ನಂತರ ಅವರ ಕನಸಿನ ಭಾರತದಲ್ಲಿ ಏನಾಗುತ್ತದೆ. ಎನುವುದನ್ನು ಅವರಿಗೆ ವರದಿ ಒಪ್ಪಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಸತ್ಯ ಶಾಂತಿ ಪ್ರೀತಿ
ಸಮಾಧಿಯಾದವು.
ನಿನ್ನೊಂಧಿಗೆ ಮಣ್ಣು ಮಾಡಿದೆವು.
ನ್ಯಾಯ ನೀತಿ”
ಎನ್ನುವ ಸಾಲುಗಳಲ್ಲಿ ಈ ದೇಶದಲ್ಲಿ ಮೌಲ್ಯಗಳು ಮಣ್ಣು ಪಾಲಾಗುತ್ತಿವೆ. ಎನ್ನುವ ನೋವನ್ನು ತೋಡಿಕೊಳ್ಳುತ್ತಾರೆ.
ಜಗತ್ತಿನ ಆಗುಹೋಗುಗಳಿಗೆ ಅತಿ ವೇಗವಾಗಿ ಭಾವನಾತ್ಮಕವಾಗಿ ಸ್ಪಂಧಿಸಿ, ಆ ಘಟನೆ ಸನ್ನೀವೇಶಗಳಿಗೆ ಶಬ್ದ ರೂಪ ನೀಡಿ ದಾಖಲಿಸುವ ಕವಿ, ಕರೋನಾ ಮಾಹಾಮರಿಯಿಂದ ದೇಶದಲ್ಲಿಯ ನಡೆಯುತ್ತಿರುವ ಎಲ್ಲ ಘಟನೆಗಳನ್ನು ತಮ್ಮ ತೀಕ್ಷ್ಣ್ ಬರಹಗಳ ಮೂಲಕ ಸ್ಪಂದಿಸುವುದರ ಜೊತೆಗೆ ವ್ಯವಸ್ಥೆಯ ವಿರುದ್ಧ ವ್ಯಂಗ್ಯ ವಿಡಂಬನೆ, ಬಂಡಾಯದ ಮೂಲಕ ಧ್ವನಿ ಎತ್ತುವ ಆ ಕವನಗಳಾಗಿವೆ.

ಬಿಕೋ ಎನ್ನುತಿದೆ” ಕವನವು
ಮಂದಿರ ಮಸೀದಿ ಚರ್ಚ ಅಬ್ಬರ
ಮೌನವಾಗಿತ್ತು ಮಸಣ
ಇಂದು ಎಲ್ಲವೂ ಮೌನ
ಸ್ಮಶಾನದಲ್ಲಿ ಶಬ್ದ ಆಕ್ರಂದನ”
ವ್ಯವಸ್ಥೆಯ ಅಸಹಾಯಕತೆ, ಮನುಷ್ಯನ ನೋವಿಗೆ ಸ್ಪಂದಿಸದ ಜಾತಿ ಧರ್ಮಗಳು ಮೌನವಾಗಿದ್ದು ಸ್ಮಶಾನ ಮೂಕವಾಗಿದೆ. ಸ್ಮಶಾನದಲ್ಲಿ ಅಕ್ರಂದನ ಕೇಳಿಬರುತ್ತಿದೆ. ಎನ್ನುವ ಕವಿಯ ಸಾಲುಗಳು ಓದುಗನ ಮನ ತಟ್ಟುತ್ತವೆ. ವ್ಯರ್ಥವಾಯಿತು ಎನ್ನುವ ಕವನದ ಸಾಲುಗಳು ಕೂಡ ನೇರವಾಗಿ ದೇವತೆಗಳನ್ನು ಪ್ರಶ್ನಿಸುತ್ತಾರೆ.
“ಹಲೋ ಜಗತ್ತಿನ ದೇವತೆಗಳೇ
ಅದೇಷ್ಟೋ ವರುಷಗಳಿಂದ ಮಂಡಿಯೂರಿ…” ಮುಂದುವರೆದು
“ನೀವ್ಯಾರು ಬರಲಿಲ್ಲ
ನಮ್ಮ ಸಾವು ನೋವಿಗೆ
ಮೌನವಾದಿರಿ ಕಲ್ಮೊಳಗೆ” ಎನ್ನುವ ಸಾಲುಗಳು ದೇವರು ಧರ್ಮ ಜಾತಿಯನ್ನುವ ಹೆಸರಲ್ಲಿ ನಾವು ಮಾಡುವ ಪೂಜೆ, ಕಾಣಕೆ ಹರಕೆಗಳಿಂದ ಏನು ಪ್ರಯೋಜನವಿಲ್ಲ. ಮನುಷ್ಯರ ನೋವಿಗೆ ಸ್ಪಂದಿಸುವ ಶಕ್ತಿ ನಿಮಗಿಲ್ಲ ಎನ್ನುವ ವಿಡಂಬಿನಾತ್ಮಕ ಸಾಲುಗಳು ನಮ್ಮ ಒಳಹೊಕ್ಕು ನಾವೇ ಅವಲೋಕನ ಮಾಡಿಕೊಳ್ಳಬೇಕು.
ಕೋರಾನಾ ಕೊಲ್ಲುತ್ತಿಲ್ಲ. ಎನ್ನುವ ಕವನವು ವ್ಯವಸ್ಥೆಯ ವಿರುದ್ದ ಬಂಡಾಯದ ದ್ವನಿ ಎತ್ತುತ್ತ್ತಿದೆ.
ಕಟ್ಟುತಿದ್ದರೆ ಶವಗಳ ಮೇಲೆ
ಮಹಡಿ ಸೌಧವ”
ಎನ್ನುವ ಸಾಲುಗಳಲು ಇಂತಹ ಸಂಕಷ್ಟ ಪರಿಸ್ಥಿಯಲ್ಲಿ ದೇಶದ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾದ ವ್ಯವಸ್ಥೆ, ರೋಗದ ಹೆಸರಲ್ಲಿ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ತಮ್ಮ ಕಾವ್ಯದ ಮೂಲಕ ವಿವರಿಸಿದ್ದಾರೆ.

ದೇವರೆತ್ತ ಹೋದರು..? ಎನ್ನುವ ಕವನವು

ಇಲ್ಲ ದೇವರು
ಗುಡಿ, ಬಸದಿ
ಮಸಿದಿ ಚರ್ಚ
ಗುರುದ್ವಾರಗಳಲ್ಲಿ
ದೇವರೆತ್ತ ಹೋದರು…?
ನಮ್ಮ ಕಾಯುವ ಹೊಣೆ ದೇವರ ಮೇಲಿದೆ ಎನ್ನುವ ಮನುಷ್ಯನ ನಂಬಿಕೆಯನ್ನು ದೇವರು ಉಳಿಸಬೇಕು. ಅದು ದೇವರ ಜವಾಬ್ದಾರಿ ಆದರೆ ದೇವರು ಕಾಣೆಯಾಗಿದ್ದಾರೆ. ಹುಡುಕಿಕೊಂಡು ಬನ್ನಿ ಎನ್ನುವ ವ್ಯಂಗ್ಯಭಾವವನ್ನು ನಾವು ಈ ಕವನದಲ್ಲಿ ಕಾಣುತ್ತವೆ. ಹೀಗೆ ದೇವರು, ಧರ್ಮ ವ್ಯವಸ್ಥೆಗಳು ಈ ರೋಗದ ಹೆಸರಲ್ಲಿ ನಡೆದ ಬ್ರಷ್ಟಾಚಾರವನ್ನು “ ಲೂಟಿ ಎನ್ನುವ ಕವನವು ಬಯಲಿಗೆಳೆಯುತ್ತದೆ. ಸಾವಿರ ಸಾವಿರ/ ಹೋಡೆದರು ಕೇಳಿ/ ಕರೋನಾ ರೋಗದ ಹೆಸರಲ್ಲಿ ಲೂಟಿ
ವಿರುದ್ದ ಮನುಷ್ಯನಿಗೆ ಸಹಾಯ ಮಾಡಲು ವಿಫಲವಾದಾಗ
ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎನ್ನುವ ಪರಿಹಾರವನ್ನು
“ಲಸಿಕೆ ಪಡೆಯಿರಿಅವರೇ ಸೂಚಿಸುತ್ತಾರೆ.

ಕೇಳಲೊಲ್ಲದು’

ನಿತ್ಯ ಯೋಗ ರೋಗಕೆ
ನೀತಿ ಪ್ರೀತಿ ದ್ಯೋತಕ”
ಲಸಿಕೆ ಯೋಗ ಸರಿಯಾದ ಜೀವನ ಕ್ರಮವನ್ನು ಅನುಸರಿಸದರೆ ರೋUವÀನ್ನು ದೂರವಿಡಲು ಸರಿಯಾದ ಮುಂಜಾಗ್ರತ ಕ್ರಮವನ್ನು ಬೇರೆಯವರ ಒತ್ತಾಯಕ್ಕಾಗಿ ಮಾಡದೇ ನೀತಿಯಂತೆ ಅನುಸರಿಸಿದರೆ ಅದುವೆ ಪ್ರೀತಿಯ ದ್ಯೋತಕ ಎನ್ನುವ ಸಂದೇಶÀವನ್ನು ಸಮಸ್ಯೆಗೆ ಪರಿಹಾರವನ್ನು ಕವಿ ನೀಡುತ್ತಾರೆ.
ಮಹಾಮಾರಿ ಎನ್ನುವ ಕವನವು
ಎಚ್ಚರ ಬಲು ಎಚ್ಚರ
ಅಲ್ಲ ಪ್ರಾಣ ಸಸ್ತ”
ಎನ್ನುವ ಕವನವು ಅಲೆ ಅಲೆಯಾಗಿ ಬರುತ್ತಿರುವ ಕರೋನಾ ರೋಗದಿಂz ನಮ್ಮನ್ನು ನಾವೆ ಕಾಪಾಡಿಕೊಳ್ಳಬೆಕು. ಎನ್ನುವುದರ ಜೋತೆಗೆ ಪ್ರಾಣ ಉಳಿಸಿಕೊಳ್ಳಲು ಅಸ್ಪತ್ರೆಗಳಿಗೆ ಕಟ್ಟುವ ಬಿಲ್ ನೆನಪಿಸಿಕೊಂಡರೆ ಪ್ರಾಣ ಸಸ್ತು ಇಲ್ಲಾ ಹುಷಾರಾಗಿರಬೇಕು ಎನ್ನುವ ಕಳಕಳಿಯನ್ನು ಓದುಗನಿಗೆ ನೀಡುತ್ತಾರೆ.
ಕೆಟ್ಟೆವು—ಕವನದಲ್ಲಿ ದೇಶದ ವ್ಯವಸ್ಥೆಯು ರೂಪಿಸಿದ ನಿಯಮಗಳ ಪಾಲಿಸಿದರು. ಮಹಾಮಾರಿಯಿಂದ ಜನರನ್ನು ರಕ್ಷಿಸಲು ವ್ಯವಸ್ಥೆವಿ ಫಲವಾಯಿತು. ಎನ್ನುವ ಟೀಕೆಯನ್ನು

ಅಂದು ಮುಖಕ್ಕೆ ಬಟ್ಟೆ
ಕಟ್ಟಲು ಹೇಳಿದಿರಿ
ಇಂದು ಹೆಣಕ್ಕೆ ಬಟ್ಟೆ ಸುತ್ತುತಿದ್ದೆೆವೆ ನೀವೆ ಹೇಳಿರಂತೆ
ಎನ್ನುವ ಕವಿತೆಯ ಕೈ ಮೀರಿದ ಪರಿಸ್ಥಿಯ ಚಿತ್ರಣವನ್ನು ಕಣ್ಣ ಮುಂದೆ ಇಡುತ್ತದೆ
ಹೀಗೆ ಕವಿ ಸಮಕಾಲಿನ ಪರಿಸ್ಥಿಗೆ ಸ್ಪಂದಿಸುತ್ತಾ ಬಂಡಾಯದ ದ್ವನಿ ಎತ್ತಿದರೆ ಪ್ರೀತಿ ಪ್ರೇಮ ಸ್ನೇಹಗಳ ಭಾವನೆಗಳನ್ನು ಶಬ್ದಗಳ ರೂಪಗಳನ್ನು ಬಳಸಿ ನವಿರಾಗಿ ಪ್ರೇಮ ಕಾವ್ಯಗಳನ್ನು ರಚಿಸಿದ್ದಾರೆ. ಬಂದು ಹೋದಳು, ನನ್ನ ಗೆಳತಿ, ನೆಲ ಮುಗಿಲ ಪ್ರೀತಿಯ ಎನ್ನುತ ಗೆಳತಿಯ ಸ್ನೇಹವು ನೆಲಮುಗಿಲಿನಂತೆ ನಿರತಂರವಾದುದು ಎನ್ನುವ ಕವಿ ಪ್ರಕೃತಿಯ ಆರಾಧಕರಾಗಿ ಗಿಡ, ಮರ ಹಕ್ಕಿ ಮಾವು-ಬೇವು ಎಲ್ಲವನ್ನು ಕಾವ್ಯದ ರೂಪಕಗಳನ್ನಾಗಿ ನವಿರಾದ ಕಾವ್ಯದ ರಚಿಸುವ ಕಲೆಯನ್ನು ಸಿದ್ದಿಸಿಕೊಂಡಿದ್ದಾg. ನಗುವೆ ಬದುಕಿನ ಆಸ್ತಿ ಎನ್ನುವ ಸಂದೇಶವನ್ನು ಆಸ್ತಿ ಎನ್ನುವ ಕವನ ಸಾರುತ್ತದೆ. ಕನಸುಗಳ ಅಪ್ಪಿಕೊಂಡು ತಂಪು ನೆರಳಲಿ ಭಾವ ಬುತ್ತಿಯನ್ನು ಉಣ್ಣ ಬಯಸುವ ಕವಿ ಮಾವು ಬೇವಿನ ಚಿಗುರಲ್ಲಿ ಸ್ನೇಹದ ಚಿಗುರು ಕಾಣುತ್ತ ಜೀವವ ಪರಿಮಳವನ್ನು ಆಸ್ಪಾದಿಸುತ್ತ ಸಾಗುವವನಿಗೆ ನಗುವೇ ಆಸ್ತಿ ಎನ್ನುವ ಸಂದೇಶ ಸಾರುತ್ತಾನೆ. ಹಸಿರು ಬನದಲ್ಲಿ ಕಾವ್ಯ ಪಕ್ಷಿಯನ್ನು ಕಾಣುತ್ತ ಕತ್ತಲೆಗೆ ಭರವಸೆಯಾಗಿ ನಗುವ ಚಂದಿರ ಬಾಳಿನಲ್ಲಿ ಬೆಳಕು ಚೆಲ್ಲಲಿ ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತಾನೆ.

-ಡಾ.ನಿರ್ಮಲ ಬಟ್ಟಲ
ಬೆಳಗಾವಿ.

Don`t copy text!