ಪ್ರಮುಖ ಬೇಡಿಕೆ ಇಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ
e-ಸುದ್ದಿ ಮಸ್ಕಿ
ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದಂತೆ ಗುರುವಾರ ಕಪ್ಪು ಪಟ್ಟಿ ಧರಿಸಿ ಮಸ್ಕಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ಅ. 29 ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಾಲಸ್ವಾಮಿ ಹಂಪನಾಳ ತಿಳಿಸಿದರು. ಶಿಕ್ಷಕರ ಪ್ರಮುಖ ಬೇಡಿಕೆಯಾದ ವರ್ಗಾವಣೆ ಕಳೆದ 2 ವರ್ಷದಿಂದ ನಡೆದಿರುವುದಿಲ್ಲ. NPS ರದ್ದು ಪಡಿಸಿ OPS ಜಾರಿಗೆ ತರಬೇಕು. ಪ್ರಾಥಮಿಕ ಶಾಲಾ ಶಿಕ್ಷಕ ಪದವೀಧರರಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸಿ 6-8 ನೇ ತರಗತಿಗೆ ಅವರನ್ನು ಪರಿಗಣಿಸಬೇಕು. ಭಡ್ತಿಯಲ್ಲಿ ಆದ್ಯತೆ ನೀಡಬೇಕು. 2008 ಕ್ಕೆ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರಿಗೆ ವರ್ಗಾವಣಾ ಸಂದರ್ಭಗಳಲ್ಲಿ ಖಾಲಿ ಇದ್ದ ಎಲ್ಲಾ ಹುದ್ದೆಗಳನ್ನು ನೀಡುವಂತಾಗಬೇಕು. ಗ್ರಾಮೀಣ ಕ್ರಪಾಂಕದಿಂದ ವಂಚಿತರಾದ ಶಿಕ್ಷಕರಿಗೆ ಹಿಂದಿನ ಸೇವೆಯನ್ನು ಪರಿಗಣಿಸಿ ಆರ್ಥಿಕ ಸೌಲಭ್ಯ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ತಾಲೂಕು ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರ, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ , ಪಂಪಾಪತಿ ಹೂಗಾರ, ನೇತ್ರಾವತಿ, ಅಮರೇಶ ಉದ್ಬಾಳ, ಮಂಜುನಾಥ ಹಾಲಪುರ, ಮಲ್ಲಮ್ಮ , ನಾಗನಗೌಡ ಹಾಗೂ ಇತರರು ಇದ್ದರು.