ವೀರ ವನಿತೆ
ವೀರಾವೇಶದಿ ಹೋರಾಟಗೈದ
ಧೀರತೆಯ ಪ್ರತೀಕರ ನಿನ್ನಯ ನಿಲುವು
ತ್ರಿಕಾಲ ಇಷ್ಟಲಿಂಗ ಪೂಜೆ ಮಾಡಿ
ಲಿಂಗಾಯತ ಧರ್ಮದ ಸಂಸ್ಕಾರ ಬೆಳಗಿ..
ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಊದಿ
ಭಾರತದ ಸ್ವಾತಂತ್ರ್ಯಕ್ಕಾಗಿ ನಾಂದಿಹಾಡಿ
ಧೀರತೆಯ ಧೀಮಂತ ನಾಯಕಿನೀನು
ಭಾರತೀಯ ಶೌರ್ಯಪ್ರದರ್ಶಸ ನಾಯಕಿ
ನಿನ್ನ ದಿಟ್ಟ ಹೆಜ್ಜೆಯು ನಮಗೆ ಸ್ಪೂರ್ತಿ
ನಿನ್ನ ಸ್ವಾಭಿಮಾನದ ಮಾತು ನಮಗೆ ಹೆಮ್ಮೆ
ಭಾರತಾಂಬೆಯ ಹೆಮ್ಮೆಪಡುವವೀರಪುತ್ರಿ
ಕನ್ನಡ ನಾಡಿನ ಕಣ್ಮನಿ ನೀನು..
ಕೆಚ್ಚೆದೆಯ ಹೋರಾಟ ಮಾಡಿ
ಇಂಗ್ಲೀಷ್ ರ ಸೊಕ್ಕಡಗಿ
ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದ ತಾಯಿ
ನಿನಗೆ ನನ್ನ ಕೋಟಿ ನಮನ ಮಾತೆ…
–ಶ್ವೇತಾ.ಜೆ.