ಮಾಸದ
ಹಳೆಯ ಅವಶೇಷಗಳು
ಚಂಡಮಾರುತದಂತೆ ಬೀಸಿ
ಎಸೆಯುತಲಿವೆ
ಕಾಣದ ಬಂಡೆಗಲ್ಲುಗಳನ್ನು
ಆತ್ಮವೆಂಬ ಹರಿವ ನದಿಯಲ್ಲಿ..
ಶಿಶಿರ ಋತುವಿನ
ನರ್ತನದಲ್ಲೂ
ನೀ ಸುರಿಸುವ
ಮಳೆಯೇ ಸಾಕು
ಈ ಗಿಡಕೆ,
ಬೇಕಿಲ್ಲ ಮತ್ತಾವ
ಇಬ್ಬನಿ ಹನಿಯೂ,
ಮೃದು ನಯನಗಳು
ಮುಳುಗಿವೆ,
ಭೋರ್ಗರೆವ ಜಲಪಾತದಲ್ಲಿ
ಅಗ್ನಿಯಿಲ್ಲದೇ ದಹಿಸುತಾ
ನಿಶಬ್ದದಲ್ಲೇ ಕಿರುಚುತಾ,
ಸುರಂಗದಲ್ಲಿ ನಿದಿರಿಸಿ,
ಅರಿಯದೇ ದೂರ ಸರಿಯುತಲಿವೆ
ಸುರಿವ ಮಳೆಯಿಂದ,
ವಸಂತ ಋತುವಿನ
ಎಲೆಯೊಂದು
ಮರೆಯಾದ ಭಾವಚಿತ್ರವ
ಮತ್ತೆ ಮತ್ತೆ ತೂಗುಹಾಕಲು
ಹೊಡೆಯುತಲಿರುವುದು ಮೊಳೆಗಳನ್ನ
ಹೃದಯವೆಂಬ ಗೋಡೆಗೆ
ಮುರಿದು ಬೀಳುವವರೆಗೂ..,..
–ಲಕ್ಷ್ಮೀ ಮಾನಸ