ಕೌಜಲಗಿ ಕೀರ್ತಿ
ಹುಟ್ಟಿದರು ಕೌಜಲಗಿ
ಕರುನಾಡ ಪ್ರೀತಿ
ಸೇವೆ ತ್ಯಾಗ ಸಮರಸ
ಅಶೋಕ ಪರುಶೆಟ್ಟಿ
ಅವರ ದಿವ್ಯ ನೀತಿ
ಎಲ್ಲ ಸಮಾಜದ
ನೇತಾರ ದಿಟ್ಟ ನಾಯಕ
ಹೆಸರಾಯಿತು ಗ್ರಾಮ
ಬೆಳಗಾವಿ ಜಿಲ್ಲೆಯಲಿ
ಸಹಕಾರ ಉದ್ದಿಮೆ
ನೆಲ ಜಲದ ಪ್ರೇಮ
ಶತಮಾನಕೊಬ್ಬ ಶ್ರೇಷ್ಟ
ರಾಜಕಾರಣಿ ಮುತ್ಸದ್ದಿ
ಬಡವರ ದೀನ ದಲಿತರ
ಏಳ್ಗೆಯೇ ಕುಟುಂಬದ
ನಿತ್ಯ ಶಿವ ಮಂತ್ರ
ಬಸವ ತತ್ತ್ವವ ಬದುಕಿದರು
ಇವರ ಆಶಾಕಿರಣ
ರವಿ ಹುಟ್ಟಿ ಬಂದ
ಶೋಕವಿರದ
ನಗೆಯ ಸರದಾರ
ಪರುಶೆಟ್ಟಿ ಅಶೋಕ ಅವರ
ಜೀವ ಪಾವನ
ಮುಳುಗಿತು ಕೌಜಲಗಿ ಸೂರ್ಯ
ಇರಲಿ ನಿಮ್ಮ ಹರಕೆ
ನಮ್ಮ ಮೇಲೆ ಹಿರಿಯಣ್ಣ
-ಡಾ ಶಶಿಕಾಂತ ಪಟ್ಟಣ ಪುಣೆ
26 October 2021
ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಬಸವ ತತ್ವ ನಿಷ್ಟ ಪರುಶೆಟ್ಟಿ ಕುಟುಂಬದ ಹಿರಿಯ ಸದಸ್ಯ ಜಿಲ್ಲೆಯ ಹಿರಿಯ ಮುತ್ಸದ್ದಿ ರಾಜಕಾರಣಿ ಸರ್ವ ಸಮಾಜದ ಹಿರಿಯ ನೇತಾರ ಸಹಕಾರ ಭೀಷ್ಮ ನೆಲ ಜಲ ಹೋರಾಟಗಾರ ಶ್ರೀ ಅಶೋಕ ಅಡಿವೇಪ್ಪ ಪರುಶೆಟ್ಟಿ ಇವರು ಇಂದು ಲಿಂಗೈಕ್ಯರಾದರು. ಅಪಾರ ಅಭಿಮಾನಿ ಬಂಧುಗಳನ್ನು ಬಿಟ್ಟು ಆಗಲಿದ್ದಾರೆ. ಇವರ ಆತ್ಮಕ್ಕೆ ಅನೇಕ ಜಿಲ್ಲೆಯ ನಾಡಿನ ಮುಖಂಡರು ಕಂಬನಿ ಮಿಡಿದಿದ್ದಾರೆ. ಇವರ ಮಗ ರವೀಂದ್ರ ಅಶೋಕ ಪರುಶೆಟ್ಟಿ ಅವರು ರಾಜಕೀಯ ಧುರೀಣರು.