ಸೋಮನಾಥ ನಗರದ ಸರ್ಕಾರಿ ಶಾಲೆ
ಮಸ್ಕಿ: ಪಾಚುಗಟ್ಟಿದ ಮಳೆ, ಶಾಲೆ ತುಂಬ ನೀರು
e- ಸುದ್ದಿ ಮಸ್ಕಿ
ಕೊವಿಡ್ -19 ನಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಶಾಲೆಗಳು ಸೋಮವಾರದಿಂದ ಎಲ್ಲೇಡೆ ಆರಂಭವಾಗಿವೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ವಿವಿಧೆಡೆ ಶಿಕ್ಷಕರು ಅದ್ದೂರಿ ಸ್ವಾಗತ ಮಾಡಿಕೊಂಡು ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಆದರೆ ಪಟ್ಟಣದ ಸೋಮನಾಥ ನಗರದ ಶಾಲೆಯ ವಿದ್ಯಾರ್ಥಿಗಳು ಮಾತ್ರ ಶಾಲಾ ಆವರಣದ ಸುತ್ತುಮುತ್ತ ನಿಂತ ಪಾಚಿ ಗಟ್ಟಿದ ಮಳೆ ನೀರು ನಿಂತ ಪರಿಣಾಮ ಸ್ವಾಗತವೂ ಇಲ್ಲ ಹಾಗೂ ಕೊಳೆತ ನೀರಿನಲ್ಲಿ ನಡೆದುಕೊಂಡು ಹೋಗುವ ದುಸ್ಥಿತಿ ಬಂದಿದೆ.
ಸೋಮನಾಥ ನಗರದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಉರ್ಧು ಪ್ರಾಥಮಿಕ ಶಾಲಾ ಆವರಣ ಮಳೆಯ ನೀರಿನಿಂದ ತುಂಬಿ ಹೋಗಿದೆ. ಶಾಲಾ ಪರಿಸರದಲ್ಲಿ ಪಾಚುಗಟ್ಟಿದ ನೀರು ನಿಂತು ಗಲೀಜು ವಾತಾವರಣ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳು ಮಾತ್ರ ಇದೇ ಪರಿಸರದಲ್ಲಿ ಶಾಲೆಗೆ ಬರುತ್ತಿದ್ದ ದೃಶ್ಯ ಕಾಣಬಹುದಾಗಿದೆ.
ಸೋಮವಾರ ಕಂಡು ಬಂತು.
ಸ್ಥಳೀಯ ಪುರಸಭೆಯ ಅಧಿಕಾರಿಗಳಾಗಲಿ ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಈ ಶಾಲೆ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಶಾಲಾ ಆವರಣದಲ್ಲಿ ಮಳೆ ನೀರು ಸಂಗ್ರಹವಾಗದಂತೆ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ಆವರಣದಲ್ಲಿನ ನೀರು ಹೊರ ಸಾಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಸೊಳ್ಳೆ ಹಾಗೂ ಗಲೀಜು ನೀರಿನ ನಡುವೆ ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ಬಂದಿದೆ ಎಂದು ಪಾಲಕರು ತಮ್ಮ ಅಳಲು ತೊಡಿಕೊಂಡಿದ್ದಾರೆ.