ಕಣಕಣದಲ್ಲೂ ಕನ್ನಡ
ಕಣಕಣದಲ್ಲೂ ಸಾರುತಿದೆ ಕನ್ನಡಮ್ಮನ
ವೈಭವ
ಮನಮನಗಳ ತುಂಬೆಲ್ಲಾ ಕನ್ನಡದ
ಪ್ರಭಾವ
ಎನಿತು ಇನಿದನಿಯು ಕನ್ನಡದ ನುಡಿಯು
ಚಂದಕಿಂತ ಚಂದ ನಮ್ಮಭಾಷೆ ಕನ್ನಡವು
ತರತರದ ಭಾಷೆಯಲಿ ಮೇರು ನುಡಿ
ಕನ್ನಡ
ಹೊಚ್ಚಹೊಸ ಭಾಷೆಯಂತೆ ಹೊಳೆವುದು ಕನ್ನಡ
ತನ್ನತನದಿ ಅಭಿಮಾನವ ತೋರುವುದು ಕನ್ನಡ
ಮನಮನಗಳಲ್ಲಿ ಮನೆಮಾಡಿ ನೆಲೆಯಾದ ಕನ್ನಡ
ಅಲೆಅಲೆಯ ಸಿಂಚನದಿ ತಂಪೆರೆವ
ಕನ್ನಡ
ಕಲೆಕಲೆತು ಮನಗಳಲ್ಲಿ ಬೆರೆತಿರುವ
ಕನ್ನಡ
ರಚನೆ: ಶ್ರೀ ಮತಿ ಆಶಾ ಎಸ್ ಯಮಕನಮರಡಿ