ನಮ್ಮ ನಾಡು

ನಮ್ಮ ನಾಡು

ಕನ್ನಡದ ಕಂಪಿನ ಕರುನಾಡು
ಸಂಸ್ಕೃತಿ ಕಲೆಗಳ ಬೀಡು
ಬಸವ ಅಲ್ಲಮರ ನಾಡು
ಸರ್ವ ಸಮಾನತೆಯ ಬೀಡು
ಚನ್ನಮ್ಮ ಅಬ್ಬಕ್ಕರಾಯಣ್ಣನ ನಾಡು
ಶೂರ ವೀರ ಕಲಿಗಳ ಬೀಡು
ಹರಿಹರ ರನ್ನ ಪಂಪರ ನಾಡು
ಜ್ನಾನ ಪೀಠ ವಿಜೇತರ ಬೀಡು
ಕೃಷ್ಣೆ ಕಾವೇರಿ ತುಂಗಭದ್ರೆಯರ ನಾಡು
ಹಚ್ಚ ಹಸುರಿನ ವನಸಿರಿಯ ಬೀಡು
ಕನ್ನಡಿಗರ ಹೆಮ್ಮೆಯ ಸಿರಿನಾಡು
ಪ್ರೀತಿ ಕರುಣೆ ಅಭಿಮಾನದ ಬೀಡು

ಪ್ರೊ.ರಾಜನಂದಾ ಘಾರ್ಗಿ

Don`t copy text!