ಮರೆಯಲಾಗದ ಅನುಭಾವ ಸರ್ ಸಿದ್ದಪ್ಪ ಕಂಬಳಿಯವರೂ..!
ಸಿದ್ದಪ್ಪ ತೋಟದಪ್ಪ ಕಂಬಳಿ ಅವರು 1882 ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು.
ಮುಂಬಯಿ ಪ್ರಾಂತ್ಯದಲ್ಲಿ ಧಾರವಾಡ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು, ಪ್ರಾಂತ್ಯದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ದೊಡ್ಡಮೇಟಿ ಅಂದಾನಪ್ಪ, ಗಿರಿಮಲ್ಲಪ್ಪ ನಲ್ವಾಡಿ, ವಿಶ್ವನಾಥ ರಾವ್ ಜೋಗ್, ಶ್ರೀಪಾದ ಕರಿಗುದ್ರಿ ಮತ್ತು ತಿಮ್ಮಪ್ಪ ನೇಸ್ವಿಯವರ ಜೊತೆಗೆ ಧಾರವಾಡ ಪ್ರಾಂತ್ಯದ ಶಾಸಕರಾಗಿದ್ದರು.
ಬೆಳಗಾವಿ, ಬಿಜಾಪುರ, ಕೆನರಾ ಮತ್ತು ಧಾರವಾಡ ಪ್ರಾಂತ್ಯಗಳನ್ನು ಮುಂಬಯಿ ಪ್ರಾಂತ್ಯದಿಂದ ಕನ್ನಡ ಭಾಷಿಕರ ರಾಜ್ಯವೊಂದಕ್ಕೆ ಸೇರಿಸಲು ಹಾತೊರೆಯುತ್ತಿದ್ದ ಸಿದ್ದಪ್ಪ ಕಂಬಳಿಯವರು, ಈ ಕಾರಣದಿಂದ ಕರ್ನಾಟಕ ಎಂಬ ರಾಜ್ಯವನ್ನು ಸ್ಥಾಪಿಸಲು ಬ್ರಿಟಿಷ್ ಸರ್ಕಾರಕ್ಕೆ ಮನವಿಯನ್ನುಯಿತ್ತರು. .
ಆದರೆ, ಮೈಸೂರು ಪ್ರಾಂತ್ಯದಿಂದ ಮುಕ್ತ ಪ್ರತಿಕ್ರಿಯೆ ಬರಲಿಲ್ಲ. ಆದರೂ, ಕರ್ನಾಟಕ ಎಂಬ ಪದವನ್ನು ಸಾಧ್ಯವಾದಷ್ಟೂ ಬಳಸಲು ಮುಂದಾದರು.
ಮುಂಬಯಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿದ್ದಪ್ಪ ಕಂಬಳಿಯವರ ಸೇವೆಗೆ ಬ್ರಿಟಿಷ್ ಸರ್ಕಾರ ಸರ್ ಎಂಬ ಪದವಿಯಿಯನ್ನಿತ್ತು ಗೌರವಿಸಿತು.
ಭಾಷಾವಾರು ಪ್ರಾಂತ್ಯದ ರಚನೆಗಾಗಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರುತ್ತಾ ಬಂದ ಸರ್ ಸಿದ್ದಪ್ಪ ಕಂಬಳಿಯವರು, ಈ ಕಾರಣಕ್ಕಾಗಿ ಹಲವರ ಕೆಂಗಣ್ಣಿಗೂ ಗುರಿಯಾದರು.
1949 ರಲ್ಲಿ ಪ್ರಸಕ್ತ ಪಾವಟೆನಗರದಲ್ಲಿರುವ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಪರೋಕ್ಷವಾಗಿ ಕಾರಣರಾದರು. ಸ್ವಾತಂತ್ರ ದೊರೆತ ಮೇಲೆ ನೆಹರೂ ಸರ್ಕಾರದ ಯೋಜನೆಗಳನ್ನು ವಿರೋಧಿಸಿ ಜೀವತ್ ರಾಮ್–ಕೃಪಲಾನಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರಫ಼ುಲ್ಲ ಚಂದ್ರ ಘೋಷ್, ಮದ್ರಾಸ್ ಮುಖ್ಯಮಂತ್ರಿ ಟಂಗಟೂರಿ ಪ್ರಕಾಶಂರೊಡಗೂಡಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಸ್ಥಾಪಿಸಿದರು.
1952 ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತು. ಇದರಲ್ಲಿ ಸಿದ್ದಪ್ಪ ಕಂಬಳಿಯವರಿಗೆ ಹಿನ್ನಡೆಯಾಯಿತು. 1952 ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯು ಪ್ರಜಾ ಸೋಷಲಿಸ್ಟ್ ಪಕ್ಷದೊಂದಿಗೆ ವಿಲೀನವಾಯಿತು. ಮುಂದೆ ಅದು ಹೇಗೋ ಗೆದ್ದರು.
ಇಂತಹ ಸರ್ ಸಿದ್ದಪ್ಪ ಕಂಬಳಿಯವರು ಕರ್ನಾಟಕದ ಮರೆಯಲಾಗದ ಮಹಾನುಭಾವರಾದರು.
#ಮರೆಯಲಾಗದ ಮಹಾನುಭಾವ ಸರ್ ಸಿದ್ದಪ್ಪ ಕಂಬಳಿಯವರೂ —
ಮರೆಯಲಾಗದ ಮಹಾನುಭವ ಸರ್ ಸಿದ್ದಪ್ಪ ಕಂಬಳಿಯವರು
1882 ರ ಸೆಪ್ಟೆಂಬರ್ 11 ರಂದು ಗಂಗವ್ವ ಮತ್ತು ತೋಟಪ್ಪ ದಂಪತಿಗಳ ಮಗನಾಗಿ ಜನಿಸಿದರು.
ತಂದೆಯಾದ ಸಿದ್ದಪ್ಪ ಕಂಬಳಿಯವರು ಮಾರುವ ವೃತ್ತಿಯಾದ ಕಾರಣ ಕಂಬಳಿಯಂಬ ಅಡ್ಡ ಹೆಸರು ಬಂದಿತು. ಲಕ್ಕುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಧಾರವಾಡದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು 1904 ರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಸರಕಾರ ನೌಕರಿ ಸಿಗುವುದಾದರೂ ಜೀ ಹುಜುರ ಅನ್ನಬೇಕಾದ ಹುದ್ದೆ ಬೇಡವೆಂದು ಕಾನೂನು ಅದ್ಯಯನ ಕೈಗೊಳ್ಳಲು ಮುಂಬೈಗೆ ಪ್ರಯಾಣ ಬೆಳಸಿದರು. ಕಾನೂನು ಪರೀಕ್ಷೆಯಲ್ಲಿ ಇಡೀ ಮುಂಬೈ ರಾಜ್ಯಕ್ಕೆ ಪ್ರಥಮರಾಗಿ ಉತ್ತೀರ್ಣರಾದರು. ಸಿದ್ದಪ್ಪ ಕಂಬಳಿಯವರ ವಕಾಲತ್ತಿನ ಪ್ರತೀತಿ ಅರಿತ ಸಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮದೋಂದು ಕೇಸು ಪ್ರೀವಿ ಕೌನ್ಸಿಲ್ ಎದುರು ಹೋದಾಗ ಸಿದ್ದಪ್ಪ ಕಂಬಳಿಯವರನ್ನು ಲಂಡನ್ ಗೆ ಕಳುಹಿಸಲು ಆಲೋಚಿಸಿದಾಗ ಆಗ ಮೊದಲ ಮಹಾಯುದ್ದದ ಕಾರಣ ಪ್ರಯಾಣ ಅಪಾಯಕಾರಿ ಎಂದು ವಿಚಾರವನ್ನು ಕೈ ಬಿಟ್ಟರು ಲಿಂಗಾರಾಜ ದೇಸಾಯಿಯವರು.
1917 ರಲ್ಲಿ ಹುಬ್ಬಳ್ಳಿಯ ನಗರ ಸಭೆಯ ಸದಸ್ಯರಾಗಿ, 1921 ರಲ್ಲಿ ನಗರ ಸಭೆ ಅದ್ಯಕರಾಗಿ, ಅದೇ ಕಾಲಕ್ಕೆ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಜಿಲ್ಲಾ ಬೋರ್ಡ್ ಸದಸ್ಯರಾಗಿ, ಮುಂಬೈ ವಿಧಾನಪರಿಷತನ ಸದಸ್ಯರಾಗಿ ಆಯ್ಕೆಯಾದರು. 1924 ರಲ್ಲಿ ಮುಂಬೈ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಇತಿಹಾಸ ನಿರ್ಮಿಸಿದರು.
ಧಾರವಾಡ ದಲ್ಲಿ ಡೆಪ್ಯುಟಿ ಚನ್ನಬಸಪ್ಪನವರು ಸ್ಥಾಪಿಸಿದ ಶಿಕ್ಷಕರ ಟ್ರೆನಿಂಗ ಕಾಲೇಜು ಮತ್ತು ಅರಟಾಳ ರುದ್ರಗೌಡ್ರು ಸ್ಥಾಪಿಸಿದ ಕರ್ನಾಟಕ ಕಾಲೇಜ್ ಧಾರವಾಡ ಕಾಲೇಜನ್ನು ಬ್ರಿಟಿಷ್ ಸರಕಾರ ಆರ್ಥಿಕ ಮಿತವ್ಯಯದ ನೆಪದಡಿ ಅನುದಾನ ಸ್ಥಗಿತಗೂಳಿಸಲು ಪ್ರಯತ್ನಿಸಿದಾಗ ಬ್ರಿಟಿಷ್ ಸರಕಾರಕ್ಕೆ ಸವಾಲು ಹಾಕಿ ಏಕಾಂಗಿ ವೀರರಾಗಿ ಹೋರಾಡಿ ಇವೆರಡು ಸಂಸ್ಥೆಗಳನ್ನು ಉಳಿಸಿ ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸಲು ಕಾರಣರಾದರು ಸರ್ ಸಿದ್ದಪ್ಪ ಕಂಬಳಿಯವರು.
ಕರ್ನಾಟಕ ಏಕೀಕರಣ ಪರಿಷತ್ತಿನ ಪ್ರಥಮ ಮತ್ತು 1926 ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿ ಕರ್ನಾಟಕ ಏಕೀಕರಣಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದರು ಸರ್ ಸಿದ್ದಪ್ಪ ಕಂಬಳಿ ಸಾಹೇಬರು.
ಆಗ ಅಂದರೆ 1930 ರಲ್ಲಿ ಲಂಡನ್ನಿಲ್ಲಿ ಜರುಗುವ ದುಂಡು ಮೇಜಿನ ಪರಿಷತ್ತಿಗೆ ಅಹ್ವಾನ ಬಂದಿತು. ಆದರೆ ಅದಕ್ಕೆ ಹಾಜರಾಗಲಿಲ್ಲಾ. ಅದೇ ವರ್ಷ ನವೆಂಬರ್ ನಲ್ಲಿ ಸರ್ ಸಿದ್ದಪ್ಪ ಕಂಬಳಿ ಮುಂಬೈ ಸರಕಾರದಲ್ಲಿ ಮಂತ್ರಿಯಾದರು. ಇದು ಕನ್ನಡಿಗನೋರ್ವ ಮುಂಬೈ ಸರಕಾರದಲ್ಲಿ ಮಂತ್ರಿಯಾದ ಮೊದಲಿಗರಾದ ಇತಿಹಾಸವಾಯಿತು.
1920 ರಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರಥಮವಾಗಿ ಶೋಷಿತರ ಬೃಹತ್ ಸಮಾವೇಶ ಹಮ್ಮಿಕೂಂಡರು. ಇದರ ಮುಖ್ಯ ಅಥಿತಿಗಳು ಛತ್ರಪತಿ ಶಾಹುಮಾಹಾಜರು. ಇದರ ಸಾನಿಧ್ಯವನ್ನು ಹುಬ್ಬಳ್ಳಿಯ ಸಿದ್ದಾರೂಢ ಶ್ರೀಗಳು ವಹಿಸಿದ್ದರು.
1924 ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಲು ಗಾಂಧಿಜೀ ಬೆಳಗಾವಿಗೆ ಬಂದಾಗ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಭೇಟಿ ಮಾಡಿಸಿ ಎಂದರು ಗಾಂಧಿಯವರು.
ಇದರಿಂದ ಸಿದ್ದಪ್ಪ ಕಂಬಳಿಯವರ ವ್ಯೆಕ್ತಿತ್ವದ ಮಹತ್ವ ಅರಿವಾಗದೇ ಇರುವುದು. ಅಂಬೇಡ್ಕರ ಅವರು ಬ್ಯಾರಿಸ್ಟರ್ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ಸರ್ ಸಿದ್ದಪ್ಪ ಕಂಬಳಿಯವರು.
1932 ರ ಪುನಾ ಆ್ಯಕ್ಟ್ ನಲ್ಲಿ ಗಟ್ಟಿಯಾಗಿ ಅಂಬೇಡ್ಕರ್ ಅವರ ಬೆಂಗವಲಾಗಿ ನಿಂತವರು ಸರ್ ಸಿದ್ದಪ್ಪ ಕಂಬಳಿಯವರು.
1937 ರಲ್ಲಿ ಮುಂಬಯಿ ವಿಧಾನ ಸಭೆಗೆ ಚುಣಾವಣೆ ನಡೆದಾಗ ಸರ್ ಸಿದ್ದಪ್ಪ ಕಂಬಳಿಯವರ ವಿರುದ್ದ ಧಾರವಾಡಕ್ಕೆ ಬಂದು ಭಾಷಣ ಮಾಡಿದವರು ಜವಹರಲಾಲ್ ನೆಹರೂ ಮತ್ತು ಸರದಾರ ವಲ್ಲಭಭಾಯಿ ಪಟೇಲ್ ಅವರು.
ಆದರೆ ಪಲಿತಾಂಶ ಮಾತ್ರ ಸರ್ ಸಿದ್ದಪ್ಪ ಕಂಬಳಿಯವರದ್ದಾಗಿತ್ತು. ಬೆಳಗಾವಿಯ ಲಿಂಗರಾಜ ಕಾಲೇಜ್ ಗೆ ಅನುಮತಿ ನಿಡಲು ಪುನಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೀನ ಮೇಷ ಎಣಿಸುವಾಗ ಮಡಿವಂತರ ಮೂಗು ಹಿಡಿದು ಲಿಂಗರಾಜ ಕಾಲೇಜು ಸ್ಥಾಪನೆಗೆ ಸಿಂಡಿಕೇಟ್ ಅನುಮತಿ ಕೊಡಿಸಿದರು ಸರ್ ಸಿದ್ದಪ್ಪ ಕಂಬಳಿಯವರು.
ಶಿಕ್ಷಣ ಮಂತ್ರಿಗಳಿದ್ದಾಗ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಿ ಈ ಭಾಗದಲ್ಲಿ ಉನ್ನತ ಶಿಕ್ಷಣ ತೆಲೆ ಎತ್ತಿ ನಿಲ್ಲಿಸಲು ಕಾರಣರಾದವರು ಸರ್ ಸಿದ್ದಪ್ಪ ಕಂಬಳಿಯವರು. ಅಂಬೇಡ್ಕರ್ ಅವರು ತಮ್ಮ ಶಿಕ್ಷಣ ಪೂರೈಸಿದ ನಂತರ ಶಿಕ್ಷಣ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರಿಗೆ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಪ್ರಸ್ತಾಪಿಸಿದಾಗ ಸಿದ್ದಪ್ಪ ಕಂಬಳಿಯವರು ಪ್ರಾಧ್ಯಾಪಕ ಹುದ್ದೆಗೆ ಅವಕಾಶ ಒದಗಿಸಿ ಅಂಬೇಡ್ಕರ್ ಅವರ ಪ್ರತಿಭೆಗೆ ಭೂಮಿಕೆ ಒದಗಿಸಿಕೂಟ್ಟರು.
ಪ್ರತ್ಯೇಕ ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಅಂಬೇಡ್ಕರ್ ಅವರು ಹೆಜ್ಜೆ ಹಜ್ಜೆಗೂ ಸರ್ ಸಿದ್ದಪ್ಪ ಕಂಬಳಿಯವರೂಂದಿಗೆ ಸಮಾಲೋಚನೆ ಮಾಡಿರುವುದು ಐತಿಹಾಸಿಕ.
1930 ರಲ್ಲಿ ಸರ್ ಸಿದ್ದಪ್ಪ ಕಂಬಳಿಯವರಿಗೆ ಜಸ್ಟಿಸ್ ಆಪ್ ಪೀಸ್ ಪ್ರಶಸ್ತಿಯೂ ಬಂದಿತು. ಇದನ್ನು ಪಡೆದ ಮೊದಲ ಕನ್ನಡಿಗರು ಸರ್ ಸಿದ್ದಪ್ಪ ಕಂಬಳಿಯವರು. 1939 ರಲ್ಲಿ ಸರಕಾರ ಇವರಿಗೆ ಸರ್ ಪ್ರಶಸ್ತಿ ನೀಡಿ ಗೌರವಿಸಿತು. ಸರದಾರ ವಲ್ಲಭಭಾಯಿ ಪಟೇಲ್ ಅವರು ಕಂಬಳಿಯವರ ಮುಂಗೈ ಹಿಡಿದು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದರೂ ಸಹಿತ ತಮ್ಮ ಮಾತೃ ಪಕ್ಷಕ್ಕೆ ನಿಷ್ಠೆ ತೋರಿಸಿದರು ಸರ್ ಸಿದ್ದಪ್ಪ ಕಂಬಳಿಯವರು.
ಹೀಗಿದ್ದರು ಸರ್ ಸಿದ್ದಪ್ಪ ಕಂಬಳಿಯವರು..!
# ಕೆ.ಶಿವು.ಲಕ್ಕಣ್ಣವರ