ನೀರತಾವರೆಯಂತಿಪ್ಪೆ

ನೀರತಾವರೆಯಂತಿಪ್ಪೆ

ಲೋಕವ ಹಿಡಿದು ಲೋಕವ ಸಂಗದಂತಿಪ್ಪೆ.
ಆಕಾರವಿಡಿದು ಸಾಕಾರಸಹಿತ ನಡೆವೆ.
ಹೊರಗೆ ಬಳಸಿ ಒಳಗೆ ಮರೆದಿಪ್ಪೆ. ಬೆಂದನುಲಿಯಂತೆ ಹುರಿಗುಂದದಿಪ್ಪೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ
ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ

                                 -ಅಕ್ಕಮಹಾದೇವಿಯ ವಚನ

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ

ಅಕ್ಕಮಹಾದೇವಿಯದು ಆಧ್ಯತ್ಮದ ಮೇರು ವ್ಯಕ್ತಿತ್ವ. ಲೌಕಿಕ ಜೀವನದಲ್ಲಿ ಇದ್ದು ಆಧ್ಯತ್ಮದ ಉತ್ತುಂಗದ ಶಿಖರ ಎರಲು ಸಾಧ್ಯ ಮಾಡಿದಾಕೆ. ಲೋಕವ ಹಿಡಿದು ಅಂದರೆ ಲೌಕಿಕದಲ್ಲಿ ಇದ್ದು ಪಾರಮಾರ್ಥಿಕ ಸಾಧನೆ ಮಾಡುವಾಗ ಎನೇ ಅಡ್ಡಿ ಆತಂಕಗಳು ಬಂದರು ಎದುರಿಸಿ ಲೋಕದೊಳಗಿದ್ದು ಲೋಕದಂತಿರುವೆ ಎನ್ನುತ್ತಾಳೆ.

ಆಕಾರವಿಡಿದು ಸಾಕಾರಸಹಿತ ನಡೆವೆ

ನಿರಾಕಾರ ದೇವನನ್ನು ನಾ ಕಾಣಲು ಆಕಾರಕ್ಕೆ ಅಂದರೆ ರೂಪಕ್ಕೆ ಬಂದ‌ ಮೇಲೆ ಸಾಕಾರಮೂರ್ತಿಯನ್ನು ಹಿಡಿದು ನಡೆಯುತ್ತೇನೆ. ಸಾಕಾರ ಲಿಂಗ ಅಂದರೆ ಇಷ್ಟಲಿಂಗವಿಡಿದು ಬಾಳುತ್ತೇನೆ.

ಹೊರಗೆ ಬಳಸಿ ಒಳಗೆ ಮರೆದಿಪ್ಪೆ

ಅಕ್ಕನ‌ ಅನುಭವ ಅನುಭಾವ
ಅನನ್ಯವಾದದ್ದು. ಲೋಕದಲ್ಲಿ ಲೋಕದವರಂತೆ ಬಳಸಿ ಬದುಕುತ್ತೇನೆ. ಒಳಗೆ ಮಾತ್ರ ನಾನು ಹೊರಗಿನ ಜೀವನ‌ ಮರೆತು ಒಳಗೆ ನಾನು ನಾನಾಗಿರುತ್ತೇನೆ.

ಬೆಂದನುಲಿಯಂತೆ ಹುರಿಗುಂದಿಪ್ಪೆ

ಬೆಂಕಿಯಲ್ಲಿ ಬೆಂದಿರುವ ನುಲಿ ಅಂದರೆ ಹಗ್ಗ ಮೇಲೆ ಬೂದಿಯಂತೆ ಕಾಣುತ್ತದೆ. ಒಳಗೆ ಮಾತ್ರ ಕೆಂಡ. ಕೆಂಡದ ಕಾವು ಬೂದಿಯೊಳಗೆ ಕುಂದಿರುವುದಿಲ್ಲ. ಅದು ಒಳಗೊಳಗೆ ಉರಿಯದಂತಿರುತ್ತದೆ. ನಾನು ನೋಡಲು ಸುಟ್ಟ ಹಗ್ಗ, ಹಗ್ಗದಂತೆ ಕಂಡರೂ ಅದು ಹಗ್ಗವಲ್ಲ.

ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯಾ, ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ

ನೀರೊಳಗೆ ಇರುವ ತಾವರೆ ಹೂವಿನಂತೆ ನಾನಿರುವೆ. ನೀರಿನೊಳಗಿದ್ದರೂ ತಾವರೆ ಆ ನೀರಿಗೆ ಅಂಟದು. ನಾನು ಈ ದೇಹದಲ್ಲಿದ್ದರೂ, ಈ ದೇಹ ಈ ಲೋಕದ ಸಹವಾಸದಲ್ಲಿದ್ದರೂ ನನ್ನಾತ್ಮ ದೇಹಕ್ಕೆ ಲೋಕಕ್ಕೆ ಅಂಟದಂತಿದೆ ಎನ್ನುತ್ತಾರೆ ವೈರಾಗ್ಯ ನಿಧಿ  ಅಕ್ಕಮಹಾದೇವಿ.
ಶರಣು ಶರಣಾರ್ಥಿಗಳು

ವೀರೇಶ ಸೌದ್ರಿ ಮಸ್ಕಿ

Don`t copy text!